ನವದೆಹಲಿ: ಕೇಂದ್ರ ಸರ್ಕಾರವೂ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ ಮಾಡಿದ ಬೆನ್ನಲ್ಲೇ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂಪಾಯಿಗೆ ಹೆಚ್ಚಳ ಮಾಡಿ ದೇಶದ ಜನತೆಗೆ ಮತ್ತೊಂದು ಶಾಕ್ ನೀಡಿದೆ.
ಈ ಕುರಿತು ಇಂದು(ಏಪ್ರಿಲ್.7) ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಅಧಿಕೃತವಾಗಿ ಘೋಷಣೆ ಹೊರಡಿಸಿದ್ದಾರೆ.
ಅನಿಲ ಕಂಪೆನಿಗಳು ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ತಿಳಿಸಿವೆ. ಈ ಹಿನ್ನೆಲೆ ಪ್ರತಿ ಎಲ್‌ಪಿಜ ಸಿಲಿಂಡರ್ ಬೆಲೆಯನ್ನು 50 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನೂ ಈ ದರ ನಿಯಮಯೂ ಉಜ್ವಲ ಹಾಗೂ ಉಜ್ವಲೇತರ ಗ್ರಾಹಕರಿಗೆ ಅನ್ವವಯವಾಗಲಿದೆ ಎಂದು ಹೇಳಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ದರವೇಷ್ಟು?
ಉಜ್ವಲ ಯೋಜನೆಯ ಗ್ರಾಹಕರು ಮೊದಲು 14.2 ಕೆಜಿ ಸಿಲಿಂಡರ್‌ಗೆ 503 ರೂಪಾಯಿ ಪಾವತಿಸುತ್ತಿದ್ದರೆ ಇದೀಗ 553 ರೂ. ಪಾವತಿಸಬೇಕಾಗುತ್ತದೆ. ಅಲ್ಲದೇ ಉಜ್ವಲೇತರ ಗ್ರಾಹಕರು 14.2 ಕೆಜಿ ಸಿಲಿಂಡರ್‌ಗೆ ಮೊದಲು 803 ರೂಪಾಯಿ ಪಾವತಿಸುತ್ತಿದ್ದರೆ ಇದೀಗ 853 ರೂ.ಪಾವತಿಸಬೇಕಾಗುತ್ತದೆ.





