Mysore
21
clear sky

Social Media

ಸೋಮವಾರ, 06 ಏಪ್ರಿಲ 2026
Light
Dark

ಕಸ್ಟಡಿ ಸಾವು | 9 ಮಂದಿ ಪೊಲೀಸರಿಗೆ ಮರಣದಂಡನೆ ; ಮಧುರೈ ಕೋರ್ಟ್‌ ಮಹತ್ವದ ತೀರ್ಪು

ಮದುರೈ : ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶಾಂತನ್‌ಕುಲಂ ಪೊಲೀಸ್ ಠಾಣೆ ಕಸ್ಟಡಿಯಿಂದಲೇ ತಂದೆ,ಮಗ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸೋಮವಾರ ಒಂಬತ್ತು ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಮದುರೈ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದ್ದು, ಆರು ವರ್ಷಗಳ ಹಿಂದೆ ಘಟನೆಯಲ್ಲಿ ವ್ಯಾಪಾರಿ ಪಿ.ಜಯರಾಜ್‌ ಮತ್ತು ಅವರ ಪುತ್ರ ಜೆ.ಬೆನಿಕ್ಸ್‌ ಪೊಲೀಸ್‌ ಚಿತ್ರಹಿಂಸೆಗೆ ಬಲಿಯಾಗಿದ್ದರು.

2020 ಜೂನ್ 19ರಂದು ಕೊರೊನಾ ಲಾಕ್‌ಡೌನ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಸತಂಕುಲಂ ಪೊಲೀಸರು ಪಿ.ಜಯರಾಜ್ (೫೮) ಮತ್ತು ಅವರ ಮಗ ಜೆ.ಬೆನ್ನಿಕ್ಸ್ (೩೧) ಅವರನ್ನು ಬಂಧಿಸಿದ್ದರು. ಕಸ್ಟಡಿಯಲ್ಲಿ ಅವರಿಬ್ಬರ ಮೇಲೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಜೂನ್ 22ರಂದು ತಂದೆ ಮಗ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಸಿಬಿಐ ತನಿಖೆಯಲ್ಲಿ ಪೊಲೀಸರು ತಂದೆ-ಮಗರನ್ನು ಕ್ರೂರವಾಗಿ ಹೊಡೆದು, ಚಿತ್ರಹಿಂಸೆ ನೀಡಿದ್ದು ದೃಢಪಟ್ಟಿತ್ತು. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನ್ಯಾಯಾಲಯವು ಈ ಪ್ರಕರಣವನ್ನು “ರೇರೆಸ್ಟ್ ಆಫ್ ರೇರ್” ಎಂದು ವರ್ಣಿಸಿ, ಗರಿಷ್ಠ ಶಿಕ್ಷೆಯನ್ನು ಒತ್ತಾಯಿಸಿದ್ದ ಸಿಬಿಐ ವಾದವನ್ನು ಅಂಗೀಕರಿಸಿ ಶೀಕ್ಷೆಯನ್ನು ಪ್ರಕಟಿಸಿದೆ.

Tags:
error: Content is protected !!