Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೊದಲ ಅಲೆಯ ಕೋವಿಡ್‌ ಸೋಂಕಿತರಲ್ಲಿ ಹೃದಯಾಘಾತದ ಅಪಾಯ ಹೆಚ್ಚು: ಅಧ್ಯಯನ ವರದಿ ಬಹಿರಂಗ

ನವದೆಹಲಿ: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೋವಿಡ್‌ ಆತಂಕ ಇನ್ನೂ ಕಡಿಮೆಯಾಗಿಲ್ಲ. ಹೀಗಿರುವಾಗಲೇ ಇದೀಗ ಜನತೆಗೆ ಅಧ್ಯಯನ ವರದಿಯೊಂದು ಬಿಗ್‌ ಶಾಕ್‌ ನೀಡಿದೆ.

ಅನೇಕ ರೀತಿಯಲ್ಲಿ ಮನುಷ್ಯರನ್ನು ಕಾಡುತ್ತಲೇ ಬಂದಿರುವ ಕೋವಿಡ್‌ ವೈರಸ್‌, ಇದೀಗ ಹೃದಯಾಘಾತದ ರೂಪದಲ್ಲಿ ಭೀತಿ ಹೆಚ್ಚಿಸಿದೆ.

ಹೊಸ ಅಧ್ಯಯನದ ವರದಿ ಪ್ರಕಾರ ಕೋವಿಡ್‌ ಸಾಂಕ್ರಾಮಿಕ ರೋಗದ ಆರಂಭಿಕ ಅಂದರೆ ಮೊದಲ ಅಲೆಯಲ್ಲಿ ತೀವ್ರವಾದ ಕೋವಿಡ್‌-19 ಸೋಂಕಿಗೆ ಒಳಗಾಗಿದ್ದ ವ್ಯಕ್ತಿಗಳು ಹೃದಯಾಘಾತಕ್ಕೆ ಒಳಗಾಗುವ ಅಪಾಯ ಹೆಚ್ಚಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಕೋವಿಡ್‌ ಸೋಂಕಿಗೆ ಒಳಗಾದವರಿಗೆ ಹೋಲಿಸಿದರೆ ಹೃದಯಾಘಾತ, ಸ್ಟ್ರೋಕ್‌ ಮತ್ತು ಮರಣವನ್ನು ಅನುಭವಿಸುವ ಸಾಧ್ಯತೆಯಿದೆ.

ಇದಲ್ಲದೇ ವೈರಸ್‌ನಿಂದ ಆಸ್ಪತ್ರೆಗೆ ದಾಖಲಾದವರಿಗೆ ಅಪಾಯವು ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ ಎಂದು ವರದಿ ಬಿಗ್‌ ಶಾಕ್‌ ನೀಡಿದೆ.

ಇನ್ನು ಸಂಶೋಧನೆಗಳ ಪ್ರಕಾರ ನಿರ್ದಿಷ್ಟವಾಗಿ ವಿಭಿನ್ನ ರಕ್ತದ ಪ್ರಕಾರಗಳಿಗೆ ಸಂಬಂಧಿಸಿದ ಅಪಾಯಗಳನ್ನು ಒತ್ತಿ ಒತ್ತಿ ಹೇಳುತ್ತಿದೆ.

ಎ, ಬಿ ಮತ್ತು ಎಬಿ ರಕ್ತದ ಪ್ರಕಾರಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂದು ವರದಿಯೊಂದು ಆತಂಕಕ್ಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಜನತೆ ಭಾರೀ ಭಯಭೀತರಾಗಿದ್ದಾರೆ.

 

Tags: