Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮಣಿಪುರದಲ್ಲಿ ಮತದಾನದ ವೇಳೆ ಅಕ್ರಮ ಆರೋಪ; ಮರು ಮತದಾನಕ್ಕೆ ಕಾಂಗ್ರೆಸ್‌ ಆಗ್ರಹ

ಮಣಿಪುರ: 2024 ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ 102 ಕ್ಷೇತ್ರಗಳಿಗೆ ಶುಕ್ರವಾರ ನಡೆದಿದೆ. ಅದರಲ್ಲಿ ಮಣಿಪುರದ ಎರಡು ಲೋಕಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಕ್ಷೆತ್ರ ವ್ಯಾಪ್ತಿಯ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್‌ ಆಗ್ರಹಿಸಿದೆ.

ಮಣಿಪುರದ ಇನ್ನರ್‌ ಮಣಿಪುರ ಮತ್ತು ಔಟರ್‌ ಮಣಿಪುರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮತಗಟ್ಟೆಯ ಬಳಿ ಅಪರಿಚಿತರು ಗುಂಡಿನ ದಾಳಿ, ಬೆದರಿಸುವುದು, ಮತಯಂತ್ರಗಳಿಗೆ ಹಾನಿ ಉಂಟುಮಾಡುವುದು ಮಾಡಿದ್ದರು.

ಈ ಬಗ್ಗೆ ಮಣಿಪುರದ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಮೇಘಚಂದ್ರ ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇನ್ನರ್‌ ಮಣಿಪುರದ 36 ಮತಗಟ್ಟೆಗಳು ಹಾಗೂ ಔಟರ್‌ ಮಣಿಪುರದ 11 ಮತಗಟ್ಟೆಗಳಿಗೆ ಮರು ಮತದಾನ ನಡೆಸುವಂತೆ ಕೋರಿ ಚುನಾವಣೆ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದರು.

Tags: