ನವದೆಹಲಿ: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್, ಮಹಿಳೆಯರು ಯುವಜನತೆ ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ಎಂಬ ಪರಿಕಲ್ಪನೆಯನ್ನು ಕೇಂದ್ರೀಕರಿಸಿದ ಪ್ರಚಾರ ಗೀತೆಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ವಕ್ತಾರ ಸುಪ್ರಿಯಾ ಶ್ರಿನಾಟೆ ದಿಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಹಮ್ ಸಾಥ್ ಹೇ ತೋ ಹಾಥ್ ಯೇ ಹಲತ್ ಬದಲ್ ದೇಗಾ ಎಂಬ ಸಾಹಿತ್ಯದೊಂದಿಗೆ ಹಾಡನ್ನು ಬಿಡುಗಡೆ ಮಾಡಿದರು.
ಕಾಂಗ್ರೆಸ್ ಭರವಸೆ ನೀಡಿರುವ ನ್ಯಾಯದ ಐದು ಸ್ತಂಭಗಳನ್ನು ಆಧರಿಸಿ ಪ್ರಚಾರ ನಡೆಯಲಿದೆ. ಜನರೊಂದಿಗೆ ಮಾತನಾಡಿ, ಅವರ ಕನಸು ಮತ್ತು ಭರವಸೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನ್ಯಾಯದ ಸ್ತಂಭವನ್ನು ಸಿದ್ಧಪಡಿಸಲಾಗಿದೆ. ಮೋದಿ ಅವರು ಜನರಿಗೆ ಮೋಸ ಮಾಡಿದ ಪ್ರತಿಯೊಂದು ವಿಷಯದ ಬಗ್ಗೆ ನಾವು ಮಾತನಾಡುತ್ತೇವೆ ಎಂದಯ ಸುಪ್ರಿಯಾ ಹೇಳಿದ್ದಾರೆ.





