ಹೊಸದಿಲ್ಲಿ : ಭಾರತೀಯ ಸೈನಿಕರ ಶೌರ್ಯಪರಾಕ್ರಮವನ್ನು ಪ್ರಶಂಶಿಸಲು ಹಾಗೂ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವನ್ನು ಪ್ರಶ್ನಿಸಲು ಕಾಂಗ್ರೆಸ್ ವತಿಯಿಂದ ಬೆಂಗಳೂರು ಸೇರಿದಂತೆ ದೇಶಾದ್ಯಂತ 15 ಕಡೆಗಳಲ್ಲಿ ಜೈ ಹಿಂದ್ ಶಹಬ್ಬಾಸ್ ಸಭೆಗಳನ್ನು ಆಯೋಜಿಸಲಾಗುತ್ತಿದೆ.
ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತಾದ್ಯಂತ ಜೈ ಹಿಂದ್ ಶಹಬ್ಬಾಸ್ ಸಭೆಗಳ ಮೂಲಕ ನಮ್ಮ ವೀರ ಸೈನಿಕರಿಗೆ ಸೆಲ್ಯೂಟ್ ಮಾಡುತ್ತಿದೆ. ಸಶಸ್ತ್ರ ಪಡೆಗಳ ಯಶಸ್ಸನ್ನು ಸಂಭ್ರಮಿಸಲಿದೆ ಎಂದರು.
ಇದೇ ವೇಳೆ ಭದ್ರತಾ ಲೋಪಗಳ ಬಗ್ಗೆ ಪ್ರಸ್ತಾಪಿಸಲಾಗುವುದು. ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ವೈಫಲ್ಯ ಅನುಭವಿಸಿದೆ. ನಮ್ಮ ಆಂತರಿಕ ಭದ್ರತೆ ವಿಚಾರದಲ್ಲಿ ಅಮೆರಿಕ ತಲೆ ಹಾಕಿದ್ದು, ಇದರ ಬಗ್ಗೆ ಕೇಂದ್ರಸರ್ಕಾರದ ಮೌನದ ಕುರಿತು ಪ್ರಶ್ನೆಗಳಿವೆ ಎಂದು ಹೇಳಿದ್ದಾರೆ.
ಮೇ 20 ರಿಂದ 30ರವರೆಗೂ ದೆಹಲಿ, ಬರ್ಮಿರ್, ಶಿಮ್ಲಾ, ಪಾಟ್ನಾ, ಜಬ್ಲಾಪುರ್, ಪುಣೆ, ಗೋವಾ, ಬೆಂಗಳೂರು, ಕೊಚ್ಚಿ, ಗೊವ್ಹಾಟಿ, ಕೋಲ್ಕತ್ತ, ಹೈದ್ರಾಬಾದ್, ಭುವನೇಶ್ವರ್, ಪಟಾನ್‍ಕೋರ್ ನಗರಗಳಲ್ಲಿ ಈ ರ್ಯಾಲಿಗಳು ನಡೆಯಲಿದ್ದು, ಹಿರಿಯ ಸೈನಿಕರು, ಪಕ್ಷದ ನಾಯಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.





