Mysore
20
overcast clouds
Light
Dark

ವಿದ್ಯಾರ್ಥಿ ಕೈ ಹಿಡಿದ ಗೃಹಲಕ್ಷ್ಮೀ ಗ್ಯಾರೆಂಟಿ: ಮಾಹಿತಿ ಹಂಚಿಕೊಂಡ ರಾಗಾ!

ನವದೆಹಲಿ: ಕಾಂಗ್ರೆಸ್ ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಿಂದ ವಿದ್ಯಾಭ್ಯಾಸಕ್ಕೆ ನೆರವಾಗಿ ಇಂದು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವೇದಾಂತ್ ನಾವಿ ಅವರು ಗೃಹಲಕ್ಷ್ಮೀ ಯೋಜನೆಯ ಫಲದ ಬಗ್ಗೆ ಮಾತನಾಡಿರುವ ವೀಡಿಯೋ ಒಂದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಎಕ್ಸ್‌ ಜಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾದ ನಾವಿ ಮಾತನಾಡಿರುವ ಕಿರು ವಿಡಿಯೋವನ್ನು ಕಾಂಗ್ರೆಸ್‌ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋವನ್ನು ಸದ್ಯ ರಾಹುಲ್‌ ಗಾಂಧಿ ಹಂಚಿಕೊಂಡಿದ್ದು, ‘ಇಂತಹ ‘ಯಶಸ್ಸಿನ ಕಥೆಗಳು’ ನನ್ನನ್ನು ನಂಬುವಂತೆ ಮಾಡುತ್ತವೆ ಎಂದು ಹೇಳಿದ್ದಾರೆ.

https://x.com/RahulGandhi/status/1778080786715164799

ಕರ್ನಾಟಕ ಕಾಂಗ್ರೆಸ್‌ ತನ್ನ ಎಕ್ಸ್‌ ಖಾತೆಯಲ್ಲಿ “ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ವಿವಿಧ ರೀತಿಯಲ್ಲಿ ಆಸರೆಯಾಗಿರುವುದನ್ನು ಕಂಡು ಸಾರ್ಥಕ ಭಾವ ಮೂಡುತ್ತಿದೆ,
ಕೇವಲ ಹತ್ತು ತಿಂಗಳಲ್ಲಿ ನಮ್ಮ ಯೋಜನೆಯಗಳು ಸಾಮಾಜಿಕವಾಗಿ ಆರ್ಥಿಕವಾಗಿ ಪರಿಣಾಮಕಾರಿ ಬದಲಾವಣೆ ತರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ”.

ತಂದೆಯನ್ನು ಕಳೆದುಕೊಂಡ ದ್ವಿತೀಯ ಪಿಯುಸಿಯ ಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವೇದಾಂತ್ ಕುಟುಂಬಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಆಸರೆಯಾಗಿ ಶಿಕ್ಷಣ ಪಡೆಯಲು ನೆರವಾಗಿರುವುದು ಯೋಜನೆಯ ಸಾರ್ಥಕತೆಗೆ ಸಾಕ್ಷಿ. ಇಂತಹ ಅದೆಷ್ಟೋ ಜನರ ಬದುಕಲ್ಲಿ ಬದಲಾವಣೆಯನ್ನು ತಂದಿವೆ ನಮ್ಮ ಗ್ಯಾರಂಟಿ ಯೋಜನೆಗಳು. ಕಾಂಗ್ರೆಸ್ ಜನರ ಬದುಕನ್ನು ಕಟ್ಟಿಕೊಡುವ ಮೂಲಕ ದೇಶವನ್ನು ಕಟ್ಟಿದೆ ಎಂದು ಸಂದರ್ಶನದ ವೀಡಿಯೋ ಹಂಚಿಕೊಂಡಿದ್ದರು.

ಈ ಟ್ವೀಟ್‌ ಹಂಚಿಕೊಂಡಿರುವ ರಾಗಾ, ಇಂತಹ ‘ಯಶಸ್ಸಿನ ಕಥೆಗಳು’ ನಮ್ಮ ‘ಮಹಾಲಕ್ಷ್ಮಿ’ ಗ್ಯಾರಂಟಿ ಪ್ರತಿ ವರ್ಷ 1 ಲಕ್ಷ ರೂಪಾಯಿ ಮಹಿಳೆಯರ ಖಾತೆಗೆ ಜಮಾ ಮಾಡುವುದು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಸಾಬೀತುಪಡಿಸುತ್ತದೆ ಎಂಬ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಗೃಹಲಕ್ಷ್ಮಿ ಯೋಜನೆಯಲ್ಲಿ 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಹಣ ಒದಗಿಸುತ್ತಿದೆ. ಇಂದು ಅದೇ ಹಣದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ಕಲಿಸಿ ಇಂದು ಪಿಯುಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆಯುವಂತೆ ಮಾಡಿದ್ದಾಳೆ.

ಕಾಂಗ್ರೆಸ್‌ನ ಈ ಐತಿಹಾಸಿಕ ಯೋಜನೆಯು ಬಡ ಕುಟುಂಬಗಳ ಕನಸುಗಳಿಗೆ ವಾಸ್ತವದ ಜೀವ ನೀಡುತ್ತಿದೆ. ದೇಶದಾದ್ಯಂತ ಇರುವ ಬಡ ಕುಟುಂಬಗಳ ಮಹಿಳೆಯರು ‘ಮಹಾಲಕ್ಷ್ಮಿ ಯೋಜನೆ’ಯಿಂದ ದೇಶದಾದ್ಯಂತ ಪ್ರತಿ ವರ್ಷ ಎಷ್ಟು ವೇದಾಂತರು ತಮ್ಮ ಪ್ರತಿಭೆಯಿಂದ ಕುಟುಂಬದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂಬುದನ್ನು ಊಹಿಸಿ ಎಂದು ಬರೆದುಕೊಂಡಿದ್ದಾರೆ.

ವೇದಾಂತ್ ನಾವಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.