Mysore
30
broken clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಮತ್ತೆ ಹೆಚ್ಚಾದ ವಾಣಿಜ್ಯ ಸಿಲಿಂಡರ್ ಬೆಲೆ

ನವದೆಹಲಿ: ತೈಲ ಕಂಪನಿಗಳು ಪುನಃ ವಾಣಿಜ್ಯ ಬಳಕೆಗಾಗಿ ಬಳಸುವ ಸಿಲಿಂಡರ್‌ಗಳ ಬೆಲೆಯನ್ನು 16.5ರೂಗೆ ಏರಿಸಿದ್ದು, ಇದರಿಂದ ಸಣ್ಣ ಪುಟ್ಟ ವ್ಯಾಪಾರಿಗಳು, ಹೋಟೆಲ್‌ ಉದ್ಯಮಿಗಳು, ಇನ್ನಿತರರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಅಡುಗೆ ಬೆಲೆಯ ಸಿಲಿಂಡರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.

ದರ ಪರಿಷ್ಕರಣೆ ನಂತರ 19 ಕೆ.ಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ 1818.50 ರೂ ಆಗಿದ್ದು, 5 ಕೆ.ಜಿಯ ಸಿಲಿಂಡರ್‌ ದರದಲ್ಲೂ 4 ರೂಪಾಯಿ ಹೆಚ್ಚಳ ಮಾಡಲಾಗಿದೆ. 14.2 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಯಾವುದೇ ಬಾದಲಾವಣೆ ಮಾಡಿಲ್ಲ.

ಹೋದ ತಿಂಗಳು ಕೂಡ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು 62 ರೂಪಾಯಿಗೆ ಹೆಚ್ಚಿಸಲಾಗಿತ್ತು. ಈ ಬೆಲೆ ಏರಿಕೆಯಿಂದ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಅವಲಂಬಿತರಾಗಿರುವ ವ್ಯಾಪಾರಿಗಳು, ಉದ್ಯಮಿಗಳ ಮೇಲೆ ತೀವ್ರ ಪರಿಣಾಮ ಬೀರುವ ನಿರೀಕ್ಷೆಯಿದೆ.

ಮೈಸೂರಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ

ವಿಧ                   ಬೆಲೆ                     ಬೆಲೆ ಬದಲಾವಣೆ

ಅಡುಗೆ ಅನಿಲ        (14.2 kg)          ರೂ. 807.50 0.00

ವಾಣಿಜ್ಯ ಅನಿಲ       (19kg)           ರೂ. 1856.50 +61.50

ಅಡುಗೆ ಅನಿಲ           (5kg)              ರೂ. 301.50 0.00

ವಾಣಿಜ್ಯ ಅನಿಲ       (47.5kg)         ರೂ. 4638.50 +153.50

Tags:
error: Content is protected !!