Mysore
27
clear sky

Social Media

ಶುಕ್ರವಾರ, 23 ಜನವರಿ 2026
Light
Dark

ವಾಣಿಜ್ಯ ಎಲ್‌ಪಿಜಿ ಬಳಕೆಯ ಸಿಲಿಂಡರ್‌ ಬೆಲೆ 51 ರೂ ಇಳಿಕೆ

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 51.50 ರೂ ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಸೆಪ್ಟೆಂಬರ್.‌1ರಿಂದ ಜಾರಿಗೆ ಬರುವಂತೆ 51.50 ರೂಗಳಷ್ಟು ಕಡಿಮೆ ಮಾಡುವುದಾಗಿ ತಿಳಿಸಿವೆ.

ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಮಾತ್ರ ಕಡಿಮೆಯಾಗಿದ್ದು, 14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪರಿಷ್ಕರಣೆಯ ನಂತರ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಈಗ 1580 ರೂಗಳಿಗೆ ಲಭ್ಯವಿರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಕ್ಕೆ ಅನುಗುಣವಾಗಿ ಎಲ್‌ಪಿಜಿ ದರ ಪ್ರತಿ ತಿಂಗಳು ಪರಿಷ್ಕರಣೆಯಾಗುತ್ತಿರುತ್ತದೆ.

ಈ ಹಿಂದೆ ತೈಲ ಕಂಪನಿಗಳು 19 ಕೆಜಿ ಗ್ಯಾಸ್‌ ಸಿಲಿಂಡರ್‌ನ ಬೆಲೆಯನ್ನು 33.50 ರೂಗಳಷ್ಟು ಕಡಿಮೆ ಮಾಡಿದ್ದವು. ಅದಕ್ಕೂ ಮೊದಲು ಜುಲೈ.1ರಂದು 58.50 ರೂಗಳಷ್ಟು ಬೆಲೆಯನ್ನು ಕಡಿಮೆ ಮಾಡಿದ್ದವು.

Tags:
error: Content is protected !!