ಹೊಸದಿಲ್ಲಿ: ದಸರಾ, ದೀಪಾವಳಿ ಹಬ್ಬದ ಸಮೀಪವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಬೆಲೆಗಳನ್ನು ಏರಿಕೆ ಮಾಡಲಾಗಿದೆ.
ಹೌದು, ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ನ ಬೆಲೆಯನ್ನು 39 ರೂ.ಗೆ ಏರಿಕೆ ಮಾಡಿತ್ತು. ಆದರೆ, ಇದೀಗ ಮತ್ತೊಮ್ಮೆ ದರ ಏರಿಕೆ ಮಾಡಲಾಗಿದ್ದು ಪರಿಷ್ಕೃತ ದರ ಇಂದಿನಿಂದಲೇ (ಅಕ್ಟೋಬರ್ 1) ಜಾರಿಗೆ ಬರಲಿದೆ ಎಂದು ತೈಲ ಮಾರುಕಟ್ಟೆ ಕಂಪೆನಿಗಳು ವರದಿ ಮಾಡಿದೆ.
19 ಕೆ.ಜಿ.ಸಿಲಿಂಡರ್ ಬೆಲೆ 48.50 ರೂ., ಮತ್ತು 5 ಕೆ.ಜಿ.ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್ ಬೆಲೆ 12 ರೂ.ಗಳನ್ನು ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಕಂಪೆನಿಗಳ ಬೆಲೆ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 19 ಕೆ.ಜಿ.ಸಿಲಿಂಡರ್ ಬೆಲೆ 1,740 ರೂ. ಹಾಗೂ ಬೆಂಗಳೂರಿನಲ್ಲಿ 1, 818 ರೂ.ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಯಾವುದೇ ಬೆಲೆ ಬದಲಾವಣೆ ಇಲ್ಲ. 14 ಕೆ.ಜಿ.ಸಿಲಿಂಡರ್ ಬೆಲೆ 803 ರೂ.ಗಳಷ್ಟೇ ಇರುತ್ತದೆ ಎಂದು ಹೇಳಿದೆ.