ನವದೆಹಲಿ: ವಿದ್ಮುನ್ಮಾನ ಮತಯಂತ್ರಗಳ(ಇವಿಎಂ) ಪರ ವಿರೋಧ ಚರ್ಚೆಗಳು ಮತ್ತೆ ಶುರುವಾಗಿದೆ. ಇವಿಎಂ ನಿಷೇಧದ ಬಗ್ಗೆ ಅಮೆರಿಕಾದ ಎಲಾನ್ ಮಸ್ಕ್ ಬಿಟ್ಟ ಬಾಣ ಭಾರತಕ್ಕೆ ತಿರುಗಿದೆ. ಇವಿಎಂ ಬಗ್ಗೆ ಅಪಸ್ವರ ಎತ್ತಿರುವ ಎಲೆನ್ ಮಸ್ಕ್, ಇವಿಎಂ ಹ್ಯಾಕ್ ಆಗುವ ಸಾಧ್ಯೆತೆಯಿದ್ದು, ಇವಿಎಂ ಬಳಕೆ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಸದ್ಯ ಈ ವಿಚಾರವಾಗಿ ಭಾರತ ಚುನಾವಣಾ ಆಯೋಗವು ಎಲಾನ್ ಮಸ್ಕ್‌ಗೆ ಸವಾಲೊಂದನ್ನು ಹಾಕಿದೆ.
ಎಲಾನ್ ಮಸ್ಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಭಾರತೀಯ ಚುನಾವಣಾ ಆಯೋಗ, ಈ ಹೇಳಿಕೆ ಅಸಂಬದ್ಧ ಊಹಾಪೋಹವಾಗಿದೆ. ಭಾರತೀಯ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸುವ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದ್ದು, ಎಲಾನ್ ಮಸ್ಕ್ ಅವರೇ ಭಾರತಕ್ಕೆ ಬಂದು ಇವಿಎಂಗಳ ಹ್ಯಾಕಿಂಗ್ ಅನ್ನು ಪ್ರದರ್ಶಿಸಲು ನಾವು ನಿಮಗೆ ಸವಾಲು ಹಾಕುತ್ತೇವೆ ಎಂದು ಹೇಳಿದೆ.
ಎಲಾನ್ ಮಸ್ಕ್ ಹೊತ್ತಿಸಿದ್ದ ಇವಿಎಂ ನಿಷೇಧದ ಕಿಚ್ಚು, ಸದ್ಯ ದೇಶಾದ್ಯಾಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಸ್ಕ್ ಅವರ ಹೇಳಿಕೆಗೆ ವಿಪಕ್ಷ ನಾಯಕರು ಬೆಂಬಲ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭಾರತದ ಇವಿಎಂಗಳು ಬ್ಲಾಕ್ ಬಾಕ್ಸ್ ಎಂದು ವ್ಯಾಖ್ಯಾನಿಸಿದ್ದಾರೆ.





