Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ತಿಹಾರ್‌ ಜೈಲಿಗೆ ಮರಳಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌

ನವದೆಹಲಿ: ದೆಹಲಿಯ ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಡೆಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಇಂದು (ಜೂನ್‌.2) ಮತ್ತೆ ಜೈಲಿಗೆ ಶರಣಾಗಿದ್ದಾರೆ.

ಮನಿ ಲಾಂಡರಿಂಗ್‌ ಪ್ರಕರಣದಲ್ಲಿ ಬಂಧಿತರಾಗಿರುವ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಅವರ ಜಾಮೀನು ಅವಧಿ ಜೂನ್‌.1ಕ್ಕೆ ಮುಕ್ತಾಯವಾದ ಹಿನ್ನಲೆ ಇಂದು (ಭಾನುವಾರ) ತಿಹಾರ್‌ ಜೈಲಿಗೆ ತೆರಳಿ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.

ಇನ್ನು ಅವರು ಇಂದು ತಿಹಾರ್‌ ಜೈಲಿಗೆ ತೆರಳುವ ಮುನ್ನಾ ಎಎಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ನಾನು ಭ್ರಷ್ಟಾಚಾರಕ್ಕಾಗಿ ಜೈಲಿಗೆ ಹೋಗುತ್ತಿಲ್ಲ. ಬದಲಾಗಿ ಸರ್ವಾಧಿಕಾರತ್ವದ ವಿರುದ್ಧ ಧನಿ ಎತ್ತಿದ್ದಕ್ಕಾಗಿ ಜೈಲಿಗೆ ಹೋಗುತ್ತಿದ್ದೇನೆ. ಸುಪ್ರೀಂ ಕೋರ್ಟ್‌ ನನಗೆ 21 ದಿನಗಳ ಗಡುವು ನೀಡಿತ್ತು. ನಾನು ಇದರಲ್ಲಿ ಒಂದು ದಿನವನ್ನು ವ್ಯರ್ಥ ಮಾಡಿಲ್ಲ. ದೇಶದ ಉಳಿವಿಗಾಗಿ ಪ್ರಚಾರ ಮಾಡಿದ್ದೇನೆ.

ನನಗೆ ಪಕ್ಷಕ್ಕಿಂತ ದೇಶ ಮುಖ್ಯ ಎಂದು ಹೇಳಿದ ಅವರು, ಎಕ್ಸಿಟ್‌ ಪೋಲ್ಸ್‌ಗಳ ಸಮೀಕ್ಷೆಗಳೆಲ್ಲಾ ನಕಲಿ ಎಂದು ವ್ಯಂಗ್ಯವಾಡಿದರು.

ರಾಜ್‌ಘಟ್‌ನ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದ ಬಳಿಕ ಕನ್ನಾಟ್‌ನ ಹನುಮಾನ್‌ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಸಿಎಂ ಕೇಜ್ರಿವಾಲ್‌ ಅಲ್ಲಿಂದ ತಿಹಾರ್‌ ಜೈಲಿಗೆ ಹೋಗಿ ಅಧಿಕಾರಿಗಳ ಮುಂದೆ ಶರಣಾದರು.

https://x.com/munsifdigital/status/1797259251175620718

Tags: