ಪಿತ್ರೋಗಢ್: ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್ ಹಾಗೂ ಹೆಚ್ಚುವರಿ ಚುನಾವಣಾಧಿಕಾರಿ ವಿಜಯ್‌ಕುಮಾರ್ ಜೋಗ್ದಂಡ್ ಅವರು ಹೆಲಿಕಾಫ್ಟರ್ ಮೂಲಕ ಮುನ್ಸಿಯಾರಿಗೆ ತೆರಳುತ್ತಿದ್ದ ವೇಳೆ ಉತ್ತರಾಖಂಡದ ಪಿತ್ರೋಘಡ್‌ನಲ್ಲಿ ಆ ಹೆಲಿಕಾಫ್ಟರ್ ತುರ್ತಾಗಿ ಭೂಸ್ಪರ್ಶವಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆಯು ವರದಿ ನೀಡಿದೆ.
ಈ ಸಂದರ್ಭದಲ್ಲಿ ಹೆಲಿಕಾಫ್ಟರ್‌ನಲ್ಲಿದ್ದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಹೆಚ್ಚುವರಿ ಚುನಾವಣಾ ಆಯುಕ್ತ ವಿಜಯ್ ಕುಮಾರ್ ಸೇರಿದಂತೆ ಹೆಲಿಕಾಫ್ಟರ್‌ನ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಉತ್ತರಾಖಂಡದ ಸರ್ಕಾರ ಹೇಳಿದೆ. ವಾತಾವರಣ ಹೆಲಿಕಾಪ್ಟರ್ ಚಾಲನೆಗೆ ಪೂರಕವಾಗಿರದ ಕಾರಣ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.