Mysore
23
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಛತ್ತೀಸ್‌ಗಢ|ಎನ್‌ಕೌಂಟರ್‌ನಲ್ಲಿ ವಾರಂಗಲ್‌ನ ನಕ್ಸಲ್‌ ರೇಣುಕಾ ಸಾವು

ದಂತೇವಾಡ: ಛತ್ತೀಸ್‌ಗಢದ ಬಸ್ತರ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ ಪ್ರಕರಣದಲ್ಲಿ ತೆಲಂಗಾಣ ರಾಜ್ಯದ ವಾರಂಗಲ್‌ ಮೂಲದ ನಿವಾಸಿಯಾಗಿದ್ದ ನಕ್ಸಲ್‌ ಮಹಿಳೆ ರೇಣುಕಾ ಅಲಿಯಾಸ್‌ ಸರಸ್ವತಿ ಸಾವನ್ನಪ್ಪಿದ್ದಾರೆ.

ಗೀದಮ(ದಂತೇವಾಡ) ಮತ್ತು ಭೈರಮಗಢ(ಬಿಜಾಪುರ) ಅರಣ್ಯ ಪ್ರದೇಶದಲ್ಲಿ ಇಂದು(ಮಾರ್ಚ್‌.31) ಸುಮಾರು ಬೆಳಿಗ್ಗೆ 9 ಗಂಟೆಯ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ ಮುಗಿದ ಬಳಿಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿಗಳಿಗೆ ಮಹಿಳಾ ನಕ್ಸಲ್‌ ಮೃತದೇಹ ಪತ್ತೆಯಾಗಿದೆ. ಅಲ್ಲದೇ ಭದ್ರತಾ ಸಿಬ್ಬಂದಿಗಳು ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಂತೇವಾಡ ಪೊಲೀಸ್‌ ವರಿಷ್ಠಾಧಿಕಾರಿ ಗೌರವ್‌ ರಾಯ್‌ ಹೇಳಿದ್ದಾರೆ.

ಇನ್ನು ಮೃತರಾದ ನಕ್ಸಲ್‌ ಮಹಿಳೆಯೂ ನಕ್ಸಲ ವಿಶೇಷ ವಲಯ ಸಮಿತಿ ಸದಸ್ಯರಾಗಿದ್ದರು. ಅಲ್ಲದೇ , ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಪತ್ರಿಕಾ ತಂಡದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!