Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಛತ್ತೀಸ್‌ಗಢ: ನಾಲ್ವರು ನಕ್ಸಲರ ಎನ್‌ಕೌಂಟರ್‌, ಓರ್ವ ಪೊಲೀಸ್ ಸಿಬ್ಬಂದಿ ಸಾವು

ದಂತೇವಾಡ: ಛತ್ತೀಸ್‌ಗಡದ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ನಕ್ಸಲೀಯರ ಮುಖಾಮುಖಿಯಲ್ಲಿ ಜಿಲ್ಲಾ ಭದ್ರತಾ ಪೊಲೀಸ್‌ ಪಡೆಯ (DRG) ಹೆಡ್‌ ಕಾನ್ಸ್‌ಟೇಬಲ್‌ ಸನ್ನು ಕರಮ್‌ ಕೂಡಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ನಾರಾಯಣಪುರ ಹಾಗೂ ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮದ್‌ ಅರಣ್ಯದಲ್ಲಿ ಶನಿವಾರ ಸಂಜೆ ಭದ್ರತಾ ಸಿಬ್ಬಂದಿ ಜಂಟಿ ತಂಡವು ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಗುಂಡಿನ ಚಕಮಕಿ ನಿಂತ ನಂತರ ನಾಲ್ವರು ನಕ್ಸಲರ ಶವಗಳು, AK-47 ರೈಫಲ್‌ ಮತ್ತು ಸ್ವಯಂ ಲೋಡಿಂಗ್‌ ರೈಫಲ್‌ (SLR) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Tags:
error: Content is protected !!