Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಛತ್ತೀಸಗಢ | ನಕ್ಸಲ್‌ ನಿರ್ಮೂಲನೆಗೆ ಬದ್ಧ ; ಅಮಿತ್‌ ಶಾ

ರಾಯಪುರ : ಛತ್ತೀಸಗಢ ರಾಜ್ಯದಲ್ಲಿ ನಕ್ಸಲ್‌ ಪಿಡುಗನ್ನು ನಿರ್ಮೂಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಭಾನುವಾರ ರಾಯಪುರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ರಾಷ್ಟ್ರಪತಿಯವರ ಬಣ್ಣಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿನ ನಕ್ಸಲ್‌ ಪಿಡುಗನ್ನು 2026ರ ಮಾ.31 ರೊಳಗಾಗಿ ನಿರ್ಮೂಲನೆ ಮಾಡಲಾಗುವುದು. ಛತ್ತೀಸಗಢವು ನಕ್ಸಲ್‌ ಮುಕ್ತವಾದರೆ ಇಡೀ ದೇಶ ನಕ್ಸಲ್‌ ಹಾವಳಿಯಿಂದ ಮುಕ್ತವಾದಂತಾಗುತ್ತದೆ ಎಂದು ಹೇಳಿದರು.

ಛತ್ತೀಸಗಢದ ಪೊಲೀಸರು ನಕ್ಸಲರ ವಿರುದ್ಧದ ಹೋರಾಟದಲ್ಲಿ ಕಳೆದೊಂದು ವರ್ಷದಿಂದ ಗಮನಾರ್ಹ ಸಾಧನೆ ಮಾಡಿದ್ದಾರೆ. 287 ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿದ್ದು, 1000 ಮಂದಿ ಬಂಧಿತರಾಗಿದ್ದಾರೆ. ನಕ್ಸಲರ ನಾಯಕರು ಸಹ ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ಇದೇ ರೀತಿ ಉಳಿದ ನಕ್ಸಲರು ಹಿಂಸಾಚಾರ ಬಿಟ್ಟು ಮುಖ್ಯವಾಹಿನಿಗೆ ಬರಬೇಕು ಎಂದು ಮನವಿ ಮಾಡಿದರು.

 

Tags: