Mysore
22
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ರಾಜಸ್ಥಾನ| ರಾಸಾಯನಿಕ ಟ್ಯಾಂಕರ್‌ ಸ್ಫೋಟ: ಇಬ್ಬರು ಯೋಧರ ಸಾವು

ಜೈಪುರ: ಮಹಾಜನ್‌ ಫೀಲ್ಡ್‌ ಫೈರಿಂಗ್‌ ರೇಂಜ್‌ನಲ್ಲಿ ಯೋಧರು ತರಬೇತಿ ಪಡೆಯುವ ಸಂದರ್ಭದಲ್ಲಿ ಟ್ಯಾಂಕರ್‌ಗೆ ರಾಸಾಯನಿಕ ಭರ್ತಿ ಮಾಡುವಾಗ ಟ್ಯಾಂಕರ್‌ ಸ್ಫೋಟಗೊಂಡು ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಪುರ ಬಳಿಯಿರುವ ಬಿಕೇನಾರ್‌ನ ಫೈರಿಂಗ್‌ ರೇಂಜ್‌ನಲ್ಲಿ ಇಂದು(ಡಿಸೆಂಬರ್‌.18) ಯುದ್ಧ ಟ್ಯಾಂಕರ್‌ಗೆ ರಾಸಾಯನಿಕ ಭರ್ತಿ ಮಾಡುವಾಗ ಚಾರ್ಜರ್‌ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಘಟನೆ ಸಂಭವಿಸಿದಾಗ ಇಬ್ಬರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದರು.ಆದರೆ ಗಾಯಗೊಂಡ ಇಬ್ಬರು ಯೋಧರು ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಈ ಇಬ್ಬರನ್ನು ಉತ್ತರಪ್ರದೇಶದ ಅಶುತೋಷ್‌ ಮಿಶ್ರಾ ಹಾಗೂ ರಾಜಸ್ಥಾನ ಮೂಲದ ಜಿತೇಂದ್ರ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಹಿಂದೆಯೂ ತರಬೇತಿ ವೇಳೆ ಇಂತಹ ಸ್ಫೋಟ ಸಂಭವಿಸಿದ್ದು, ಯೋಧರೊಬ್ಬರು ಗಂಭೀರ ಗಾಯಗೊಂಡಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Tags:
error: Content is protected !!