ನವದೆಹಲಿ: ದೇಶದಲ್ಲಿ ಎಲ್ಲಾ ಸರಕುಗಳಿಗೂ ಟ್ಯಾಕ್ಸ್ ಹಾಕುತ್ತಿರುವ ಕಾರಣಕ್ಕೆ ಮಧ್ಯಮ ವರ್ಗದವರು ಬದುಕಲು ಆಗುತ್ತಿಲ್ಲ ಎಂಬ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಮಧ್ಯಮ ವರ್ಗದ ನೆಟ್ಟಿಗರೊಬ್ಬರು ಕೇಂದ್ರ ಹಣಕಾಸು ಸಚಿವರಿಗೆ ಪ್ರಶ್ನಿಸಿದ್ದಾರೆ. ಆದರೆ ಇದೀಗ ಈ ಪ್ರಶ್ನೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ತುಷಾರ್ ಶರ್ಮಾ ಎಂಬ ನೆಟ್ಟಿಗಗೊಬ್ಬ ತಮ್ಮ ಎಕ್ಸ್ ಖಾತೆಯ ವೇದಿಕೆಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಉತ್ತರ ನೀಡಿರುವ ಅವರು, ನಿಮ್ಮ ಹೇಳಿಕೆಗಳಿಗೆ ಮತ್ತು ದೇಶದ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದಗಳು. ನೀವು ಎತ್ತಿರುವ ಸಮಸ್ಯೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸ್ಪಂದಿಸುವ ಸರ್ಕಾರವಾಗಿದೆ. ಸಾರ್ವಜನಿಕರ ಧ್ವನಿಯನ್ನು ಆಲಿಸಿ ಪರಿಹಾರ ನೀಡುತ್ತದೆ. ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಕ್ಕೆ ಇನ್ನೊಮ್ಮೆ ಧನ್ಯವಾದ. ನೀವು ನೀಡಿರುವ ಮಾಹಿತಿ ಅತ್ಯಮೂಲ್ಯವಾಗಿದೆ ಎಂದು ಹೇಳಿದ್ದಾರೆ.





