Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸುಪ್ರೀಂಕೋರ್ಟ್‌ ಮಧ್ಯಸ್ಥಿಕೆ ನಂತರ 8 ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ಹೆಸರು ಅಂತಿಮಗೊಳಿಸಿದ ಕೇಂದ್ರ ಸರ್ಕಾರ

ಹೊಸದಿಲ್ಲಿ: ಸಾಂವಿಧಾನಿಕವಾಗಿರುವ ಕೊಲಿಜಿಯಂ ಶಿಫಾರಸ್ಸುಗಳ ಮಹತ್ವವನ್ನು ಸುಪ್ರೀಂಕೋರ್ಟ್‌ ದೃಢಪಡಿಸಿದ ನಂತರ ಕೇಂದ್ರ ಸರ್ಕಾರ ಶನಿವಾರ(ಸೆ.20) ಎಂಟು ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದೆ.

ಸುಪ್ರೀಂಕೋರ್ಟ್‌ ಅಟಾರ್ನಿ ಜನರಲ್‌ ಅವರಿಗೆ ಸಂವಿಧಾನದಲ್ಲಿ ಕೊಲಿಜಿಯಂ ಶಿಫಾರಸ್ಸುಗಳು ಕೇವಲ ಸಲಹೆಗಳು ಮಾತ್ರವಲ್ಲ. ಅವುಗಳಿಗೆ ಸಾಂವಿಧಾನಿಕ ಬದ್ಧತೆ ಇದೆ ಎಂದು ಮನವರಿಕೆ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ತೀರ್ಮಾನಿಸಿದೆ.

ನ್ಯಾಯಾಂಗ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ಇರುವ ಸಂಘರ್ಷಗಳು ಹೆಚ್ಚುತ್ತಿರುವ ಮಧ್ಯೆಯೇ ನೇಮಕಾತಿ ಪ್ರಕ್ರಿಯೆಗೆ ನಿರ್ಧಿಸಿರುವುದು ಮಹತ್ವದ ಅಂಶವಾಗಿದೆ. ರಾಜ್ಯಗಳ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿ ವಿಷಯದಲ್ಲಿ ದೆಹಲಿ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವ ಮನಮೋಹನ್‌ ಅವರನ್ನೇ ಮುಂದೆ ನ್ಯಾಯಾಧೀಶರಾಗಿ ಮುಂದುವರೆಯುವಂತೆ ಸೂಚಿಸಿದೆ.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್‌ ಶಕ್ದೇರ್‌ ಅವರನ್ನು ಹಿಮಾಚಲ ಪ್ರದೇಶದ ನ್ಯಾಯಾಮೂರ್ತಿಗಳಾಗಿ ನೇಮಿಸಿದ್ದು, ಇದೇ ಕೋರ್ಟ್‌ನ ಇನ್ನೊಬ್ಬ ನ್ಯಾಯಾಧೀಶ ಸುರೇಶ್‌ ಕುಮಾರ್‌ ಕೈತ್‌ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ, ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಇಂದ್ರಪ್ರಸನ್ನ ಮುಖರ್ಜಿ ಅವರನ್ನು ಮೇಘಾಲಯ ಹೈಕೋರ್ಟ್‌ ನ್ಯಾಯಾಧೀಶರನ್ನಾಗಿ, ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿ ನಿತಿನ್‌ ಮಧೂಕರ್‌ ಜಮಾದಾರ್‌ ಅವರನ್ನು ಕೇರಳ ಹೈಕೋರ್ಟ್‌ ನ್ಯಾಯಾಧೀಶರನ್ನಾಗಿ ಮಾಡಿದೆ.

ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ಆರ್‌.ಶ್ರೀರಾಮ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದೆ. ಹಿಮಾಚಲ ಪ್ರದೇಶದ ಸಿಜೆ ಆಗಿರುವ ಎಂ.ಎಸ್‌.ರಾಮಚಂದ್ರರಾವ್‌ ಅವರನ್ನು ಜಾರ್ಖಂಡ್‌ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಿದೆ. ಅಲ್ಲದೆ ಕೇಂದ್ರಡಾಳಿತ ಪ್ರದೇಶಗಳಾದ ಜಮ್ಮುಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ತಶಿ ರಬ್‌ ಸ್ತನ್‌ ಅವರೇ ಈ ಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರಾಗಿ ಮುಂದುವರೆಯಲಿದ್ದಾರೆ.

Tags: