ನವದೆಹಲಿ: ದೆಹಲಿಯ ಮುಗ್ಧ ಮಕ್ಕಳನ್ನು ಎಎಪಿ ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡು ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ದೆಹಲಿಯ ಮಾಜಿ ಸಿಎಂ ಅರವಿಂದ್ ಕ್ರೇಜಿವಾಲ್ ವಿರುದ್ಧ ಕೇಂದ್ರ ಬಿಜೆಪಿ ವಾಗ್ದಾಳಿ ನಡೆಸಿದೆ.
ದೆಹಲಿ ಚುನಾವಣೆಯೂ 2025ರ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು, ಈ ವಿಧಾನಸಭೆ ಚುನಾವಣೆಯ ಸಂಬಂಧ ಎಎಪಿ ಬಗ್ಗೆ ಮಕ್ಕಳು ಹೇಳಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಿಎಂ ಅರವಿಂದ್ ಕ್ರೇಜಿವಾಲ್ ಹಂಚಿಕೊಂಡಿರುವ ಬಗ್ಗೆ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಜೆಪಿ ನಾಯಕ ಗೌರವ್ ಭಾಟಿಯಾ ಪ್ರತಿಕ್ರಿಯೆ ನೀಡಿದ್ದು, ಕೇಜ್ರಿವಾಲ್ ಅವರ ಈ ಪೋಸ್ಟ್‌ಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದೆ. ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮಕ್ಕಳ ಹೇಳಿಕೆಗಳು, ಅವರ ಚಟುವಟಿಕೆಗಳನ್ನು ಚುನಾವಣೆಗೆ ಬಳಸಿಕೊಳ್ಳಬಾರದು. ಈ ತರಹ ಮಕ್ಕಳನ್ನು ಬಳಸಿಕೊಂಡರೆ ಬಾಲಾಪರಾಧಿ ಕಾಯಿದೆ 2015ರ ಉಲ್ಲಂಘನೆಯಾಗುತ್ತದೆ. ಇಷ್ಟೆಲ್ಲಾ ಆದರೂ ಇದುವರೆಗೂ ಅರವಿಂದ್ ಕೇಜ್ರಿವಾಲ್ ಹಾಗೂ ಅತಿಶಿ ಮಕ್ಕಳ ಹೇಳಿಕೆಯ ಪೋಸ್ಟ್‌ಗಳನ್ನು ತೆಗೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.





