ಹೊಸದಿಲ್ಲಿ : ಕಾಶ್ಮೀರದ ಬಗ್ಗೆ ಭಾರತ ಸ್ಪಷ್ಟ ನಿಲುವು ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರ ಹಿಂಪಡೆಯುವುದು ಹಾಗೂ ಉಗ್ರರ ಹಸ್ತಾಂತರದ ಕುರಿತಾಗಿ ಮಾತ್ರವೇ ಮಾತುಕತೆ ನಡೆಸಲಾಗುವುದು ಎಂದು ಅಮೆರಿಕಾಕ್ಕೆ ಭಾರತ ಸ್ಪಷ್ಟ ಸಂದೇಶ ನೀಡಿದೆ.
ಶನಿವಾರ ಕದನ ವಿರಾಮ ಘೋಷಣೆಯಾದ ಬಳಿಕ ಭಾರತ-ಪಾಕಿಸ್ತಾನದ ಯುದ್ಧದ ಆತಂಕ ದೂರವಾಗಿದೆ. ಆದಾಗ್ಯೂ ಗಡಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ.
ಈ ನಡುವೆ ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವ್ಯಾವ್ಸ್ ಜೊತೆ ಪ್ರಧಾನಿ ಮೋದಿ ಫೋನ್ ಮೂಲಕ ಮಾತುಕತೆ ನಡೆಸಿದ್ದು, ಭಾರತದ ಸ್ಪಷ್ಟತೆಯನ್ನು ಪ್ರತಿಪಾದಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈಗ ಮಾತನಾಡಲು ಬೇರೆ ಏನು ಉಳಿದಿಲ್ಲ. ಪಾಕ್ ಭಯೋತ್ಪಾದಕರನ್ನು ಹಸ್ತಾಂತರಿಸುವುದು ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವುದರ ಬಗ್ಗೆ ಮಾತನಾಡಿದ್ರೆ ಮಾತ್ರ ನಾವು ಸಹ ಮಾತನಾಡುವುದು. ನಮಗೆ ಬೇರೆ ವಿಷಯದ ಉದ್ದೇಶವಲ್ಲ. ಜೊತೆಗೆ ನಮಗೆ ಯಾರ ಮಧ್ಯಸ್ಥಿಕೆಯನ್ನು ಬಯಸಲ್ಲ ಎಂದು ಸ್ಪಷ್ಟವಾಗಿ ಭಾರತ ಪ್ರತಿಪಾದಿಸಿದೆ.
ಈ ಮೂಲಕ ಭಯೋತ್ಪಾದನೆ ವಿರುದ್ಧ ಭಾರತ ರಾಜಿಯಾಗುವುದಿಲ್ಲ. ಪಾಕ್ ದಾಳಿ ಮಾಡಿದರೆ ತಕ್ಕಂತೆ ಪ್ರತೀದಾಳಿ ಮಾಡುತ್ತೇವೆ ಎಂಬ ಸ್ಷಷ್ಟ ಸಂದೇಶ ರವಾನಿಸಿದೆ.





