ಮುಂಬೈ: 17,000 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಬೆಳಿಗ್ಗೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮುಂಬೈನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿತು.
ಕಫೆ ಫರೇಡ್ನ ಸೀವಿಂಡರ್‌ನಲ್ಲಿರುವ ಅಂಬಾನಿ ಅವರ ನಿವಾಸಕ್ಕೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಧಿಕಾರಿಗಳು ತಲುಪಿದರು. ಏಳರಿಂದ ಎಂಟು ಅಧಿಕಾರಿಗಳು ಆವರಣಕ್ಕೆ ಆಗಮಿಸಿ ಶೋಧ ನಡೆಸಿದ್ದಾರೆ. ಶೋಧ ಕಾರ್ಯ ನಡೆಯುತ್ತಿರುವಾಗ ಅಂಬಾನಿ ಹಾಗೂ ಅವರ ಕುಟುಂಬ ಮನೆಯಲ್ಲೇ ಹಾಜರಿದ್ದರು.
ಆಗಸ್ಟ್.4ರಂದು ಜಾರಿ ನಿರ್ದೇಶನಾಲಯ ಅನಿಲ್ ಅಂಬಾನಿ ಅವರ ಕಂಪನಿಗಳು ಒಳಗೊಂಡ 17,000 ಕೋಟಿ ರೂ ಸಾಲ ವಂಚನೆ ಪ್ರಕರಣದ ತನಿಖೆಯನ್ನು ವಿಸ್ತರಿಸಿತು.
ಅನಿಲ್ ಅಂಬಾನಿ ಅವರಿಗೆ ಸಮನ್ಸ್ ನೀಡಿದ ಕೆಲವು ದಿನಗಳ ನಂತರ, ಸಂಸ್ಥೆಯು ಅವರ ಹಲವಾರು ಉನ್ನತ ಕಾರ್ಯ ನಿರ್ವಾಹಕರಿಗೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಿತು.





