ನವದೆಹಲಿ: ದೇಶದಲ್ಲಿ ಶೀಘ್ರದಲ್ಲೇ ನಡೆಯಲಾಗುವ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತು ಬುಧವಾರ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ರಾಜಕೀಯ ಲಾಭಕ್ಕಾಗಿ ಜಾತಿ ಸಮೀಕ್ಷೆಗಳನ್ನು ಬಳಸುತ್ತಿರುವ ವಿರೋಧ ಪಕ್ಷಗಳನ್ನು ಟೀಕಿಸಿದ ಕೇಂದ್ರ, ಮುಂಬರುವ ಜನಗಣತಿಯಲ್ಲಿ ಜಾತಿ ದತ್ತಾಂಶವನ್ನು ಸೇರಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ:- ಬಸವಣ್ಣನನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ: ಸಿಎಂ ಸಿದ್ದರಾಮಯ್ಯ
2010ರಲ್ಲೇ ಕಾಂಗ್ರೆಸ್ ಸರ್ಕಾರವು ಜಾತಿ ಗಣತಿಯನ್ನು ವಿರೋಧಿಸಿತ್ತು. ಅಂದು ಬಹುತೇಕ ರಾಜಕೀಯ ಪಕ್ಷಗಳು ಜಾತಿ ಗಣತಿ ಪರವಾಗಿದ್ದವು, ಹೀಗಿದ್ದರೂ, ಅಂದಿನ ಕಾಂಗ್ರೆಸ್ ಗಣತಿ ನಡೆಸಲಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಕಾಂಗ್ರೆಸ್ ಮತ್ತು ಅದರ ಇಂಡಿ ಒಕ್ಕೂಟದ ಪಕ್ಷಗಳು ಜಾತಿ ಗಣತಿಯನ್ನು ಒಂದು ಅಸ್ತ್ರವನ್ನಾಗಿಯೇ ಬಳಸಿಕೊಂಡು ಬರುತ್ತಿದ್ದಾರೆ ಎಂದು ಅಶ್ವಿನ್ ವೈಷ್ಣನ್ ಆರೋಪಿಸಿದರು.
ಕೆಲ ರಾಜ್ಯಗಳಲ್ಲಿ ಜಾತಿ ಗಣತಿ ಹಾಗೂ ಸಮೀಕ್ಷೆ ನಡೆದಿದೆ. ಇನ್ನೂ ಕೆಲವೆಡೆ ಕೇವಲ ರಾಜಕೀಯ ಉದ್ದೇಶದಿಂದ ಅವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಂಡಿವೆ. ಇವೆಲ್ಲೂ ಸಮಾಜದಲ್ಲಿ ಸಂದೇಹ ಮೂಡಿಸುತ್ತದೆ. ರಾಜಕೀಯ ಉದ್ದೇಶದಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗಬಾರದು. ಇದನ್ನು ಖಾತ್ರಿಪಡಿಸಿಕೊಳ್ಳವ ನಿಟ್ಟಿನಲ್ಲಿ ಜನ ಗಣತಿಯಲ್ಲಿ ಜಾತಿ ಗಣತಿಯ ಮಾಹಿತಿಯನ್ನೂ ದಾಖಲಿಸಲಾಗುವುದು ಎಂದಿದ್ದಾರೆ.





