Mysore
15
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಸಜ್ಜನ್‌ ಕುಮಾರ್‌ ವಿರುದ್ಧದ ಪ್ರಕರಣ: ಫೆ.25ಕ್ಕೆ ಅಂತಿಮ ತೀರ್ಪು ಪ್ರಕಟ

ನವದೆಹಲಿ: 1984ರ ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಶಿಕ್ಷೆಯ ಪ್ರಮಾಣವನ್ನು ದೆಹಲಿ ಹೈಕೋರ್ಟ್‌ ಕಾಯ್ದಿರಿಸಿದ್ದು, ಫೆ.25ಕ್ಕೆ ಅಂತಿಮವಾಗಿ ತೀರ್ಪು ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ದೆಹಲಿ ಹೈಕೋರ್ಟ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಅವರನ್ನು ದೋಷಿ ಎಂದು ಫೆ.12 ರಂದು ತೀರ್ಪು ಪ್ರಕಟಿಸಿತ್ತು. ಆದರೆ ಅವರಿಗೆ ಮರಣ ದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್‌ ನ್ಯಾಯಾಲಯವನ್ನು ಕೋರಿತ್ತು.

ಈ ಕುರಿತು ಇಂದು(ಫೆಬ್ರವರಿ.21) ದೆಹಲಿ ಹೈಕೋರ್ಟ್‌ ಶಿಕ್ಷೆಯ ಬಗ್ಗೆ ವಾದ-ಪ್ರತಿವಾದಗಳನ್ನು ಆಲಿಸಿ ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ.25 ಪ್ರಕಟಿಸಲಾಗುವುದು ಎಂದು ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

1984ರ ನವೆಂಬರ್‌ 1 ರಂದು ಸಿಖ್‌ ವಿರೋಧಿ ದಂಗೆಯ ವೇಳೆ ಸರಸ್ವತಿ ವಿಹಾರ್‌ ಬಳಿ ಜಸ್ವಂತ್‌ ಸಿಂಗ್‌ ಮತ್ತು ಅವರ ಮಗ ತರುಣ್‌ದೀಪ್‌ ಸಿಂಗ್‌ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್‌ ಅವರನ್ನು ಮುಖ್ಯ ಆರೋಪಿ ಎಂದು ಬಂಧಿಸಲಾಗಿತ್ತು.

ಈ ದಾಳಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಮಾರಕಾಸ್ತ್ರಗಳನ್ನು ಹಿಡಿದಿದ್ದ ಗುಂಪು, ಸಿಖ್‌ ಸಮುದಾಯದವರಿಗೆ ಸೇರಿದ ಸ್ಥಳಗಳಲ್ಲಿ ಲೂಟಿ ಮಾಡಿ, ಗಲಭೆ ಸೃಷ್ಟಿಸಿ ಅಪಾರ ಹಾನಿಗೆ ಕಾರಣವಾಗಿತ್ತು. ಆ ವೇಳೆ ಮನೆಗಳಿಗೆ ನುಗ್ಗಿದ ಉದ್ರಿಕ್ತರು, ಪತಿ ಮತ್ತು ಮಗನನ್ನು ಹತ್ಯೆ ಮಾಡಿದ್ದರು. ಆದರೆ ಈ ಪ್ರಕರಣದ ಬಗ್ಗೆ ಜಸ್ವಂತ್‌ ಪತ್ನಿ ಮನೆಗೆ ನುಗ್ಗಿ ಲೂಟ ಮಾಡಿದಲ್ಲದೇ ಬೆಂಕಿ ಹಚ್ಚಿದ್ದರು ಎಂದು ಸಾಕ್ಷಿ ಹೇಳಿರುವುದು ಪ್ರಾಸಿಕ್ಯೂಷನ್‌ ಆರೋಪ ಪಟ್ಟಿಯಲ್ಲಿ ದಾಖಲಾಗಿದೆ.

ಇನ್ನು ಸಜ್ಜನ್‌ ಕುಮಾರ್‌ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದ ನ್ಯಾಯಾಲಯ 2021 ರ ಡಿಸೆಂಬರ್‌ 16 ರಂದು ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್‌ ವಿರುದ್ಧ ಆರೋಪಿಸಿತ್ತು.

Tags:
error: Content is protected !!