Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದೇಶದ ಬೆಳವಣಿಗೆಗೆ ಬಂಡವಾಳ ಮಾರುಕಟ್ಟೆ ಮಹತ್ವದ್ದು: ವಿತ್ತ ಸಚಿವೆ ನಿರ್ಮಲಾ

ನವದೆಹಲಿ: ಭಾರತದ ಬೆಳವಣಿಗೆ ಹಾದಿಯಲ್ಲಿ ಬಂಡವಾಳ ಮಾರುಕಟ್ಟೆಯ ಪಾತ್ರ ಮಹತ್ವದ್ದಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಹೇಳಿದರು.

ಸೋಮವಾರ ಲೋಕಸಭೆಯಲ್ಲಿ 2023-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿ ಮಾತನಾಡಿದ ಅವರು, ಮಾರುಕಟ್ಟೆ ತಂತ್ರಜ್ಞಾನವು ನಾವೀನ್ಯತೆ ಹಾಗೂ ಡಿಜಿಲೀಕರಣದ ಮೂಲಕ ಇದು ಇನ್ನಷ್ಟು ವಿಸ್ತರವಾಗಿದೆ ಎಂದರು.

ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಾಗೂ ರಾಜಕೀಯ ಸಮಸ್ಯೆ ಎದುರಿಸುತ್ತಿದ್ದರೂ ಭಾರತದ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಬಡ್ಡಿ ದರ ಹಾಗೂ ಸರಕುಗಳ ಬೆಲೆಯಲ್ಲಿ ಏರಿಕೆಯ ನಡುವೆಯೂ ಭಾರತದ ಬಂಡವಾಳ ಮಾರುಕಟ್ಟೆಯು ಜಗತ್ತಿನಲ್ಲಿ ವೃದ್ಧಿ ಕಾಣುತ್ತಿರುವ ಅತ್ಯುತ್ತಮ ಮಾರುಕಟ್ಟೆ ಎನಿಸಿಕೊಂಡಿದೆ ಎಂದಿದ್ದಾರೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಶೇ 25ರಷ್ಟು ಬೆಳವಣಿಗೆ ಕಂಡಿದೆ. ಇದು 2025 ರವರೆಗೂ ಮುಂದುವರೆಯುವ ನಂಬಿಕೆಯಿದೆ. ಜುಲೈ 3 ರಂದು 30 ಷೇರುಗಳ ಇಂಡೆಕ್ಸ್‌ ದಿನದ ವಹಿವಾಟಿನಲ್ಲಿ 80ಸಾವಿರದ ಗಡಿಯನ್ನು ಮೊದಲ ಬಾರಿಗೆ ದಾಟಿ ಇತಿಹಾಸ ನಿರ್ಮಿಸಿದೆ ಎಂದು ಹೇಳಿದರು.

Tags:
error: Content is protected !!