Mysore
26
scattered clouds

Social Media

ಸೋಮವಾರ, 06 ಏಪ್ರಿಲ 2026
Light
Dark

ಚಂದ್ರನ ಮೇಲೆ ಮಾನವನನ್ನು ಕಳಿಸುವ ಸಾಹಸಕ್ಕೆ ಮುಂದಾದ ಭಾರತ

ನವದೆಹಲಿ: ಚಂದ್ರನ ಮೇಲೆ ಮಾನವನನ್ನು ಕಳಿಸುವ ಸಾಹಸಕ್ಕೆ ಭಾರತ ಮುಂದಾಗಿದ್ದು, 2104 ಕೋಟಿ ರೂ ನೀಡಲು ನಿರ್ಧಾರ ಮಾಡಿದೆ.

ಚಂದ್ರನ ಮೇಲೆ ಮಾನವರನ್ನು ಇಳಿಸಿ ಅಧ್ಯಯನ ನಡೆಸಿದ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-4 ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಂದಿನ 2040ರಲ್ಲಿ ಈ ಸಾಹಸ ನಡೆಸಲು, 2104 ಕೋಟಿ ರೂಪಾಯಿ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಇದಕ್ಕೆ ಇನ್ನಷ್ಟೇ ತಂತ್ರಜ್ಞಾನ ಸಿದ್ಧಗೊಳ್ಳಬೇಕಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2040ಕ್ಕೆ ಈ ಸಾಹಸ ನಡೆಯಲಿದೆ.

ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅವರನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ತಂತ್ರಜ್ಞಾನವನ್ನು ಇಸ್ರೋ ಅನಾವರಣಗೊಳಿಸಬೇಕಿದೆ.

ಸಾಲು ಸಾಲು ಯಶಸ್ಸು ಕಂಡಿರುವ ಇಸ್ರೋ ಇದೀಗ ಚಂದ್ರಲೋಕಕ್ಕೆ ಮಾನವರನ್ನು ಕಳಿಸಲು ಸರ್ವ ರೀತಿಯಲ್ಲೂ ತಯಾರಿ ನಡೆಸುತ್ತಿದೆ.

 

 

Tags:
error: Content is protected !!