Mysore
28
few clouds

Social Media

ಶುಕ್ರವಾರ, 27 ಮಾರ್ಚ್ 2026
Light
Dark

ತಮಿಳುನಾಡು, ಆಂಧ್ರ, ಒಡಿಶಾ ಹಾಗೂ ಕೇರಳ ರಾಜ್ಯಕ್ಕೆ ಬಂಪರ್‌

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಿದರು.

ಸೆಮಿಕಂಡಕ್ಟರ್‌ ಮಿಷನ್‌ 2.0 ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ನಮ್ಮ ತಯಾರಿಕೆ ವಲಯಕ್ಕೆ ಹೆಚ್ಚಿನ ಒತ್ತು ಕೊಡುತ್ತೇವೆ. ಸೆಮಿಕಂಡಕ್ಟರ್‌ ಮಿಷನ್‌ಗೆ 40 ಸಾವಿರ ಕೋಟಿ ನೀಡಲಾಗುತ್ತದೆ.

ಈ ಮೂಲಕ ತಮಿಳುನಾಡು, ಆಂಧ್ರ, ಒಡಿಶಾ ಹಾಗೂ ಕೇರಳ ರಾಜ್ಯಕ್ಕೆ ಬಂಪರ್‌ ಆಫರ್‌ ಸಿಕ್ಕಿದ್ದು, ನಾಲ್ಕು ರಾಜ್ಯಗಳಿಗೆ ಅರ್ಥ್‌ ಮಿನರಲ್‌ ಕಾರಿಡಾರ್‌ ಘೋಷಣೆ ಮಾಡಲಾಗಿದೆ.

ಮೆಗಾ ಟೆಕ್ಸ್‌ಟೈಲ್ಸ್‌ ಪಾರ್ಕ್‌ ಘೋಷಣೆ ಮಾಡಿದ ಅವರು, ಸಣ್ಣ ಕೈಗಾರಿಕೆಳ ಅಭಿವೃದ್ಧಿಗೆ ಎರಡು ಸಾವಿರ ಕೋಟಿ ರೂ ಅನುದಾನ ಘೋಷಿಸಿದರು.

ಡಿಜಿಟಲ್‌ ಪರಿಸರ ವ್ಯವಸ್ಥೆ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಆತ್ಮನಿರ್ಭರ ಭಾರತಕ್ಕಾಗಿ ೨ ಸಾವಿರ ಕೋಟಿ ರೂ ಮೀಸಲಿಡಲಾಗಿದೆ. ಭವಿಷ್ಯದ ಚಾಂಪಿಯನ್‌ಗಳಿಗಾಗಿ 10 ಸಾವಿರ ಕೋಟಿ ಅನುದಾನ ಘೋಷಿಸಲಾಗಿದ್ದು, ಕ್ರೆಡಿಟ್‌ ಗ್ಯಾರಂಟಿ ಸಪೋರ್ಟ್‌ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಹೇಳಿದರು.

 

Tags:
error: Content is protected !!