Mysore
24
haze

Social Media

ಶುಕ್ರವಾರ, 02 ಜನವರಿ 2026
Light
Dark

ಪಾಕ್‌ ದಾಳಿಗೆ ಪ್ರತ್ಯುತ್ತರ : ಉಗ್ರರ ಲಾಂಚ್‌ಪ್ಯಾಡ್‌ ಧ್ವಂಸಗೊಳಿಸಿದ ಬಿಎಸ್‌ಎಫ್‌

ಹೊಸದಿಲ್ಲಿ : ಅಂತರರಾಷ್ಟ್ರೀಯ ಗಡಿ ಹಾಗೂ ಎಲ್‌ಒಸಿ ಬಳಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರೆಸಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಉಗ್ರರ ಲಾಂಚ್‌ಪ್ಯಾಡ್‌ನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ತಿಳಿಸಿದೆ.

ಈ ಕುರಿತು ಶನಿವಾರ ಮಾಹಿತಿ ನೀಡಿರುವ ಬಿಎಸ್‌ಎಫ್‌ ವಕ್ತಾರರು, ಪಾಕಿಸ್ತಾನದ ಸಿಯಾಲ್‌ಕೋಟ್‌ ಜಿಲ್ಲೆಯ ಲೂನಿಯಲ್ಲಿ ಉಗ್ರರ ನೆಲೆಯಿತ್ತು. ಜಮ್ಮು ವಲಯದಲ್ಲಿ ಶುಕ್ರವಾರ ರಾತ್ರಿ ಪಾಕಿಸ್ತಾನ ಬಿಎಸ್‌ಎಫ್‌ ಪೋಸ್ಟ್‌ಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ನಾವು ತಕ್ಕ ಉತ್ತರ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:- ಭಾರತ-ಪಾಕಿಸ್ತಾನ ಸಂಘರ್ಷ | ಪಾಕ್‌ ಡ್ರೋನ್‌ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ 

ದಾಳಿಯಿಂದ ಗಡಿಯಲ್ಲಿನ ಪಾಕಿಸ್ತಾನ ರೇಂಜರ್‌ಗಳಿಗೆ ಶಿಬಿರಗಳಿಗೆ ಹೆಚ್ಚು ಹಾನಿಯಾಗಿದೆ. ಕಾಶ್ಮೀರದಿಂದ ಗುಜರಾತ್‌ವೆಗಿನ ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಶುಕ್ರವಾರ ರಾತ್ರಿ ಡ್ರೋನ್‌ ದಾಳಿ ನಡೆಸಿದೆ. ಅವರ ಎಲ್ಲಾ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Tags:
error: Content is protected !!