Mysore
18
few clouds

Social Media

ಮಂಗಳವಾರ, 27 ಜನವರಿ 2026
Light
Dark

ಮ್ಯಾನ್ಮಾರ್‌ನಲ್ಲಿ ಶೌರ್ಯ ಘರ್ಜನೆ: 9 ಮಂದಿ ಉಗ್ರರ ಸಂಹಾರ

ಮ್ಯಾನ್ಮಾರ್‌ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಅತ್ಯಂತ ಸಾಹಸಮಯ ಕೋವರ್ಟ್‌ ಆಪರೇಷನ್‌ ವಿವರಗಳು ಈಗ ಬೆಳಕಿಗೆ ಬಂದಿವೆ. ಕಳೆದ ವರ್ಷ ನಡೆದ ಈ ಮಿಂಚಿನ ದಾಳಿಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಅಧಿಕೃತ ಮುದ್ರೆ ಒತ್ತಿದೆ.

ಭಾರತೀಯ ಸೇನೆಯು ವಿದೇಶಿ ನೆಲದಲ್ಲಿ ನಡೆಸುವ ರಹಸ್ಯ ಕಾರ್ಯಾಚರಣೆಗಳನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುವುದು ಬಹಳ ಅಪರೂಪ. ಆದರೆ ಈ ಬಾರಿ 21ನೇ ಪ್ಯಾರಾ ಸ್ಪೆಷಲ್‌ ಪೋರ್ಸ್ಗೆ ಸೇರಿದ ಲೆಫ್ಟಿನೆಂಟ್‌ ಕರ್ನಲ್‌ ಘಟಾಗೆ ಆದಿತ್ಯ ಶ್ರೀಕುಮಾರ್‌ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ಘೋಷಿಸುವ ಮೂಲಕ ಈ ಕಾರ್ಯಾಚರಣೆಯ ವಿವರಗಳನ್ನು ಜಗತ್ತಿಗೆ ತಿಳಿದಿವೆ.

ಅದರಲ್ಲಿ ಮುಖ್ಯವಾಗಿ ಸಗೈಂಗ್‌ ಪ್ರದೇಶದಲ್ಲಿ ಉಗ್ರರ ಬೇಟೆ, ಉಲ್ಪಾ ಕುತಂತ್ರಕ್ಕೆ ಬ್ರೇಕ್‌, ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಭಾರತದ ಆಕ್ರಮಣಕಾರಿ ಶೈಲಿ ಸೇರಿದಂತೆ ಅನೇಕ ಕಾರ್ಯಾಚರಣೆ ಕೈಗೊಂಡ ಭಾರತೀಯ ಸೇನೆ ಉಗ್ರರ ನುಸುಳುವಿಕೆಯನ್ನು ತಡೆದಿದೆ.

 

Tags:
error: Content is protected !!