ಮುಂಬೈ: ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯ ಕೋಟೆಯನ್ನು ಮಹಾಯುತಿ ಒಕ್ಕೂಟ ಛಿದ್ರಗೊಳಿಸಿದೆ. ಈ ಮೂಲಕ ಶಿವಸೇನೆಯ 30 ವರ್ಷಗಳ ಆಡಳಿತ ಕೊನೆಯಾಗಲಿದ್ದು, ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಸಿಗುವ ಸಾಧ್ಯತೆಯಿದೆ.
ಒಟ್ಟು 227 ವಾರ್ಡ್‌ಗಳ ಪೈಕಿ ಬಿಜೆಪಿ 130, ಶಿಂಧೆ ಶಿವಸೇನೆ 28 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಉದ್ದವ್ ಶಿವಸೇನೆ 64, ಕಾಂಗ್ರೆಸ್ 12, ಎನ್‌ಸಿಪಿ-ಎಸ್‌ಪಿ 1, ಇತರರ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
2017ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಶಿವಸೇನೆ 84, ಬಿಜೆಪಿ 51 ಸೇರಿದಂತೆ ಒಟ್ಟು 166 ವಾರ್ಡ್‌ಗಳನ್ನು ಗೆದ್ದುಕೊಂಡು ಅಧಿಕಾರ ಏರಿತ್ತು.





