ಉತ್ತರ ಪ್ರದೇಶ/ ಅಯೋಧ್ಯೆ: ಬಿಜೆಪಿಯ ಮಹತ್ವಾಕಾಂಕ್ಷೆಯ ರಾಮಮಂದಿರ ನಿರ್ಮಾಣ ಮಾಡಿದ ಅಯೋಧ್ಯೆ(ಫರಿದಾಬಾದ್)ಯಲ್ಲಿಯೇ ಬಿಜೆಪಿ ಠೇವಣಿ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದೆ.
ಸಮಾಜವಾದಿ ಪಾರ್ಟಿಯ ಅವದೇಶ್ ಪ್ರಸಾದ್ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿರುವ ಲಲ್ಲುಸಿಂಗ್ ಅವರು ಹೀನಾಯ ಸೋಲು ಕಂಡಿದ್ದಾರೆ.
1980ರ ದಶಕದಿಂದಲೂ ರಾಮ ಮಂದಿರ ಹೆಸರನ್ನು ಪ್ರಸ್ತಾಪಿಸಿ ಜನಾಂದೋಲನ ಮಾಡುತ್ತಾ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುತ್ತಿತ್ತು. ಇದರ ಬೆನ್ನಲ್ಲೇ ಇದೇ ವರ್ಷ ಜನವರಿಯಲ್ಲಿ ರಾಮ ಮಂದಿರವನ್ನು ಸಹ ಉದ್ಘಾಟನೆ ಮಾಡಿದ್ದರು. ಇದು ಭಾರತೀಯರ ಅಸ್ಮಿತೆ, ಭಾರತೀಯರ ಶತಮಾನದ ಕನಸು ಎಂದೆಲ್ಲಾ ಘೋಷ ವಾಕ್ಯಗಳನ್ನು ಬೀರುತ್ತಾ ಅಧಿಕಾರ ನಡೆಸುತ್ತಿದ್ದ ಬಿಜೆಪಿಗೆ ರಾಮನ ಅಂಗಳದಲ್ಲಿಯೇ ಮುಖಭಂಗ ಉಂಟಾಗಿದೆ.
ಅವದೇಶ್ ಪ್ರಸಾದ್ ಅವರು 554289 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಇತ್ತ ಇವರ ವಿರುದ್ಧ ಠೇವಣಿ ಕಳೆದುಕೊಂಡಿರುವ ಲಲ್ಲು ಸಿಂಗ್ 499722 ಮತ ಪಡೆದು 54567 ಮತಗಳ ಅಂತರಿದಂದ ಸೋಲು ಕಂಡಿದ್ದಾರೆ. ಆ ಮೂಲಕ ಈ ಬಾರಿ ಎಸ್‌ಪಿ ಪಕ್ಷಕ್ಕೆ ಬರೋಬ್ಬರಿ 38 ಕ್ಷೇತ್ರಗಳು ಕೈ ಹಿಡಿದಿವೆ. ಕಳೆದ ಬಾರಿಯ 2019 ಚುನಾವಣೆಯಲ್ಲಿ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 71 ಕ್ಷೇತ್ರ ಗೆದ್ದುಬೀಗಿತ್ತು. ಆದರೆ ಈ ಬಾರಿ ಕೇವಲ 36 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.





