Mysore
26
few clouds

Social Media

ಬುಧವಾರ, 25 ಮಾರ್ಚ್ 2026
Light
Dark

ಬಿಹಾರ ಎಸ್‌ಐಆರ್‌ ಮತದಾರ ಸ್ನೇಹಿ : ಸುಪ್ರೀಂ ಅಭಿಪ್ರಾಯ

Supreme Court

ಹೊಸದಿಲ್ಲಿ : ಮತದಾರರ ಪಟ್ಟಿ ಕರಡು ಪರಿಷ್ಕರಣೆ ವೇಳೆ ಮತದಾರರು ಸಲ್ಲಿಸಬೇಕಾಗಿದ್ದ 7 ದಾಖಲೆಗಳಿಗಿಂತ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಸಲ್ಲಿಸಬೇಕಾಗಿರುವ 11 ದಾಖಲೆಗಳು ಮತದಾರರ ಸ್ನೇಹಿ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಜೂ.24ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರ ಮುಂದುವರಿಸಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠವು ಚುನಾವಣಾ ಆಯೋಗದ ದಾಖಲೆ ಪರಿಶೀಲನೆಯು ಮತದಾರರ ವಿರೋಧಿ ಮತ್ತು ಹೊರಗಿಡುವ ಕ್ರಮವಾಗಿದೆ ಎಂಬ ವಾದವನ್ನು ಒಪ್ಪಲಿಲ್ಲ.

ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಸ್ವೀಕರಸಿದಿರುವ ನಿರ್ಧಾರವು ಮತದಾರರ ಪಟ್ಟಿಯಿಂದ ನಾಗರಿಕರನ್ನು ಹೊಗಿಡುವ ಹುನ್ನಾರ ಎಂದು ಅರ್ಜಿದಾರರ ವಾದದ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯಲ್ಲಿ ದಾಖಲೆಗಳು ಇರುವುದು ನಿಜವಾಗಿಯೂ ನಾಗರಿಕನನ್ನು ಮತದಾರರ ಪಟ್ಟಿಗೆ ಒಳಗೊಳ್ಳಿಸುವ ಕ್ರಮ ಎಂದು ತೋರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಸಹ ನ್ಯಾಯಮೂರ್ತಿಗಳ ಅಭಿಪ್ರಾಯವನ್ನೇ ಪ್ರತಿಧ್ವನಿಸುತ್ತಾ ನ್ಯಾಯಮೂರ್ತಿ ಕಾಂತ್, ಅವರು ಎಲ್ಲಾ 11 ದಾಖಲೆಗಳನ್ನು ಕೇಳಿದರೆ, ಅದು ಮತದಾರರ ವಿರೋಧಿ. ಆದರೆ ಯಾವುದೇ ಒಂದು ದಾಖಲೆಯನ್ನು ಕೇಳಿದರೆ, ಅದು ಹೇಗೆ ವಿರೋಧಿಯಾಗುತ್ತದೆ ಎಂದು ಹೇಳಿದರು.

ಆಧಾರ್ ಅನ್ನು ಸ್ವೀಕರಿಸದಿರುವುದು ಅನ್ಯಾಯ ಎಂಬ ಅರ್ಜಿದಾರರ ವಾದದ ಹೊರತಾಗಿಯೂ, ಇತರ ದಾಖಲೆಗಳ ಆಯ್ಕೆಗಳನ್ನು ಕೂಡ ನೀಡಲಾಗಿದೆ ಎಂದು ಪೀಠವು ಹೇಳಿದೆ. ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಇದಕ್ಕೆ ಒಪ್ಪಲಿಲ್ಲ. ದಾಖಲೆಗಳ ಸಂಖ್ಯೆ ಹೆಚ್ಚಿದ್ದರೂ, ಅವುಗಳ ವ್ಯಾಪ್ತಿ ಅತ್ಯಂತ ಕಡಿಮೆ ಎಂದು ಅವರು ಹೇಳಿದರು. ಮತದಾರರೊಂದಿಗೆ ಪಾಸ್‌ಪೋರ್ಟ್‌ಗಳ ಲಭ್ಯತೆಯ ಉದಾಹರಣೆಯನ್ನು ಅವರು ನೀಡಿದರು.

Tags:
error: Content is protected !!