Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಭಾರತ-ಚೀನಾ ಯೋಧರು ಘರ್ಷಣೆಯಿಂದ ಹಿಂದೆ ಸರಿದಿರುವುದು ಉತ್ತಮ ಬೆಳವಣಿಗೆ : ಅಮೆರಿಕ

ವಾಷಿಂಗ್ಟನ್​ ​(ಅಮೆರಿಕ): ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನಡೆದ ಭಾರತ ಚೀನಾ ಯೋಧರ ಘರ್ಷಣೆಯ ನಂತರ ಇದೀಗ ಭಾರತ ಮತ್ತು ಚೀನಾ ಎರಡೂ ದೇಶಗಳು ಸಂಘರ್ಷದಿಂದ ಹಿಂದೆ ಸರಿದಿರುವುದು ಉತ್ತಮ ಬೆಳವಣಿಗೆ ಮತ್ತು ಸಂತಸ ತಂದಿದೆ ಎಂದು ಅಮೆರಿಕ ಹೇಳಿದೆ.

ಮಂಗಳವಾರ ಶ್ವೇತಭವನದಲ್ಲಿ ನಡೆದ (ಸ್ಥಳೀಯ ಕಾಲಮಾನ) ಮಾಧ್ಯಮಗೋಷ್ಟಿಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು, ಭಾರತ-ಚೀನಾ ಯೋಧರ ಘರ್ಷಣೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ಭಾರತ ಮತ್ತು ಚೀನಾ ಶಾಂತಿ ಕಾಪಾಡುತ್ತಿರುವುದಕ್ಕೆ ಬೈಡನ್​ ಆಡಳಿತಕ್ಕೆ ಸಂತೋಷವಾಗಿದೆ ಎಂದಿದ್ದಾರೆ.ಅಲ್ಲದೇ ವಿವಾದಿತ ಗಡಿಗಳ ಬಗ್ಗೆ ಚರ್ಚಿಸಲು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಮಾರ್ಗಗಳನ್ನು ಬಳಸುವಂತೆ ಎರಡೂ ರಾಷ್ಟ್ರಗಳಿಗೆ ಅಮೆರಿಕ ಸಲಹೆ ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!