Mysore
25
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

ಬಾಂಗ್ಲಾ ಮಾಜಿ ಸ್ಪೀಕರ್‌ ಶಿರಿನ್‌ ಶರ್ಮಿನ್‌ ಚೌಧರಿ ಬಂಧನ

ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಸ್ಫೀಕರ್‌ ಆಗಿದ್ದ ಶಿರಿನ್‌ ಶರ್ಮಿನ್‌ ಚೌಧರಿ ಅವರನ್ನು ಢಾಕಾ ಮೆಟ್ರೋಪಾಲಿಟನ್‌ ಪೊಲೀಸರ ಪತ್ತೇದಾರಿ ವಿಭಾಗವು ಬಂಧಿಸಿದೆ.

ವಿದ್ಯಾರ್ಥಿ ಚಳುವಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವೊಂದರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.

ಶಿರಿನ್‌ ಅವರು ಬಾಂಗ್ಲಾದೇಶದ ಮೊದಲ ಮಹಿಳಾ ಸ್ಫೀಕರ್‌ ಆಗಿ 2013ರಿಂದ 2024ರ ಆಗಸ್ಟ್‌ವರೆಗೆ ಕಾರ್ಯ ನಿರ್ವಹಿಸಿದ್ದರು.

2025ರ ಆಗಸ್ಟ್‌.5ರಂದು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಸರ್ಕಾರ ಪತನಗೊಂಡ 27 ದಿನಗಳ ನಂತರ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಅವರ ದೀರ್ಘಕಾಲದ ಸಂಸದೀಯ ಪಯಣ ಅಂತ್ಯಗೊಂಡಿತ್ತು.

Tags:
error: Content is protected !!