ಹೊಸದಿಲ್ಲಿ: ಬೆಂಗಳೂರಿನ ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ ಸಂಬಂಧಪಟ್ಟಂತೆ 3,400ಕೋಟಿಗೂ ಹೆಚ್ಚಿನ ವರ್ಗಾವಣೆ ಮಾಡಬಹುದಾದ ಟಿಡಿಆರ್ ಪ್ರಮಾಣಪತ್ರಗಳನ್ನು ಒಂದು ವಾರದೊಳಗೆ ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಕರ್ನಾಟಕ್ಕೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಗುರುವಾರ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿರುವ ಪೀಠವು, ಸರ್ಕಾರದ ನಿಲುವು ಏಕರೂಪವಾಗಿಲ್ಲ. ಸರ್ಕಾರ ಆಗಾಗ ನಿಲುವನ್ನು ಬದಲಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ವಾದ-ವಿವಾದ ಆಲಿಸಿದ ಪೀಠವು, ನಾವು ಎಲ್ಲಾ ವಿಷಯವನ್ನು ಪರಿಗಣಿಸುತ್ತೇವೆ ಎಂದು ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಿತು.



