ಹೊಸದಿಲ್ಲಿ: ಏಷ್ಯಾ ಖಂಡದಲ್ಲಿ ಅತ್ಯಂತ ಪ್ರಭಾವಶಾಲಿ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮೂಲದ ಲೋವಿ ಇನ್ಸ್‌ಟಿಟ್ಯೂಟ್ ಎಂಬ ಚಿಂತನ ವೇದಿಕೆ ಪಟ್ಟಿಯಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಹೇರಿದೆ.
ಲೋವಿ ಇನ್ಸ್‌ಟಿಟ್ಯೂಟ್‌ನ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಅಮೆರಿಕಾ ಹಾಗೂ ಚೀನಾ ಮೊದಲಿದ್ದು, ಅಮೆರಿಕಾ ದೇಶವೇ ಅತ್ಯಂತ ಶಕ್ತಿಶಾಲಿ ದೇಶವಾಗಿದೆ. ಈ ಪವರ್ ಇಂಡೆಕ್ಸ್‌ನಲ್ಲಿ ಒಟ್ಟಾರೆ 27 ದೇಶಗಳಿವೆ. ಅವುಗಳಲ್ಲಿ ಸೂಪರ್ ಪವರ್, ಮೇಜರ್ ಪವರ್, ಮಿಡಲ್ ಪವರ್ ಹಾಗೂ ಮೈನರ್ ಪವರ್ ಎಂದು ನಾಲ್ಕು ರೀತಿಯಲ್ಲಿ ವಿಭಾಗಿಸಲಾಗಿದೆ. ಸೂಪರ್ ಪವರ್‌ನಲ್ಲಿ ಅಮೆರಿಕಾ ಹಾಗೂ ಚೀನಾ ಸೂಪರ್ ಪವರ್ ಎನಿಸಿಕೊಂಡಿವೆ. ಮೇಜರ್ ಪವರ್ ದೇಶಗಳು ಯಾವುದು ಇಲ್ಲ. 16 ದೇಶಗಳು ಮಿಡಲ್ ಪವರ್ ಪಟ್ಟಿಯಲ್ಲಿದ್ದು, ಇವುಗಳಲ್ಲಿ ಭಾರತ 39.1 ಅಂಕಗಳನ್ನು ಪಡೆದುಕೊಂಡು ಉನ್ನತ ಸ್ಥಾನದಲ್ಲಿದೆ. ಇನ್ನುಳಿದ ಆಸ್ಟ್ರೇಲಿಯಾ, ಜಪಾನ್, ಸೌತ್‌ಕೊರಿಯಾ ಹಾಗೂ ರಷ್ಯಾ ದೇಶಗಳು ಸೇರಿದಂತೆ ಇನ್ನುಳಿದ ರಾಷ್ಟ್ರಗಳು 30ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿವೆ. ಒಂದು ಕಾಲದಲ್ಲಿ ವಿಶ್ವದ ಸೂಪರ್ ಪವರ್ ದೇಶವಾಗಿದ್ದ ರಷ್ಯಾ ಇಂದು 6ನೇ ಸ್ಥಾನದಲ್ಲಿದೆ.