Mysore
20
overcast clouds
Light
Dark

ಮೋದಿ ಧ್ಯಾನದ ಬಗ್ಗೆ ಖರ್ಗೆ ಹೇಳಿದಿಷ್ಟು

ನವದೆಹಲಿ: ತಮಿಳುನಾಡಿನ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಧ್ಯಾನ ಮಂಟಪದ ಪ್ರಧಾನಿ ನರೇಂದ್ರ ಮೋದಿ ಅವರ 45 ಗಂಟೆಗಳ ಕಾಲ ಧ್ಯಾನದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದಾರೆ.

ಖಾಸಗಿ ವಾಹಿನಿಯೊಂದರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಖರ್ಗೆ, ಮೋದಿ ಅವರು ೪೫ ಗಂಟೆಗಳ ಕಾಲ ಧ್ಯಾನವನ್ನು ಮನೆಯಲ್ಲೇ ಮಾಡಬಹುದಿತ್ತು, ಕನ್ಯಾಕುಮಾರಿಗೆ ಹೋಗುವ ಅಗತ್ಯ ಏನಿದೆ? ಹತ್ತು ಸಾವಿರ ಪೊಲೀಸ್‌ ಸಿಬ್ಬಂದಿ ಅವರ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ಏಕೆ ಈ ನಾಟಕ? ನೀವು ಮನೆಯಲ್ಲಿಯೇ ಪೂಜೆ ಮತ್ತು ಧ್ಯಾನ ಮಾಡಬಹುದು. ಭಧ್ರತೆಗಾಗಿ ಸಾವಿರಾರು ಪೊಲೀಸರನ್ನು ಅಲ್ಲಿಗೆ ಕರೆದುಕೊಂಡಿ ಹೋಗಿದ್ದೀರಿ. ಇದೇನು ಪ್ರದರ್ಶನ? ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಭದ್ರಕೋಟೆಗಳನ್ನು ಕಳೆದುಕೊಳ್ಳಲಿದೆ
ಇಂಡಿಯಾ ಬಣವು ೨೭೩ ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ತನ್ನ ಭದ್ರಕೋಟೆಗಳನ್ನು ಕಳೆದುಕೊಳ್ಳಲಿದೆ. ಮೈತ್ರಿಕೂಟಕ್ಕೆ ೨೭೨ ಸ್ಥಾನಗಳ ಅಗತ್ಯವಿದೆ. ಮೈತ್ರಿ ಪಕ್ಷವು ಬಿಜೆಪಿಗಿಂತ ಹೆಚ್ಚು ಮುಂದಿದೆ. ಬಿಜೆಪಿ ಮತ್ತು ಮೋದಿ ಆತಂಕದಲ್ಲಿದ್ದಾರೆ. ನಾವು ೨೭೩ ಸ್ಥಾನಗಳನ್ನು ಪಡೆಯುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಜನರು ಅಂತಹ ದ್ವೇಷ ಭಾಷಣಗಳನ್ನು ಕೇಳಲು ಆಸಕ್ತಿ ಹೊಂದಿಲ್ಲ. ಜನರು ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂದರು.

ಜಾತಿ, ಧರ್ಮದ ಬಗ್ಗೆ ಮಾತನಾಡುವ ಮೋದಿ, ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಲ್ಲ. ಮೋದಿ ಇದರ ಬಗ್ಗೆ ಮಾತನಾಡಬೇಕಿತ್ತು. ಕಳೆದ ೧೦ ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ ಅದನ್ನು ಜನರಿಗೆ ತಿಳಿಸಬೇಕು ಎಂದಿದ್ದಾರೆ ಖರ್ಗೆ.