ನವದೆಹಲಿ: ಸಾರ್ವತ್ರಿಕ ಚುನಾವಣೆ ವ್ಯವಸ್ಥೆಯಲ್ಲಿ ಭಾಗಿಯಾಗಲು ಜಾಮೀನು ಪಡೆದಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇಂದು ಮತ್ತೆ ತಿಹಾರ್ ಜೈಲಿಗೆ ವಾಪಸ್ ಆಗಲಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಕೇಜ್ರಿವಾಲ್ ಅವರು, ಇಂದು ನಾನು ತಿಹಾರ್ ಜೈಲಿಗೆ ಹೋಗಿ ಶರಣಾಗುತ್ತೇನೆ. 21 ದಿನಗಳ ಕಾಲ ಲೋಕಸಭಾ ಚುನಾವಣೆಯಲಿ ಭಾಗವಹಿಸಿಲು ಅವಕಾಶ ನೀಡಿd ಸುಪ್ರೀಂ ಕೋರ್ಟ್‌ಗೆ ನನ್ನ ಧನ್ಯವಾದಗಳು ಎಂದು ಉಲ್ಲೇಖಿಸಿದ್ದಾರೆ.
ಜೈಲಿಗೆ ತೆರಳುವ ಮುನ್ನ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರಿಗೆ ನಮನ ಸಲ್ಲಿಸುತ್ತೇನೆ. ಅಲ್ಲಿಂದ ಹನುಮಾನ್ ದೇಗುಲಕ್ಕೆ ತೆರಳಿ ಪಾರ್ಥನೆ ಸಲ್ಲಿಸುತ್ತೇನ ಎಂದು ಹೇಳಿದ್ದಾರೆ.
ಬಳಿಕ ಎಎಪಿ ಪಕ್ಷದ ಕಚೇರಿಯಲ್ಲಿ, ಕಾರ್ಯಕರ್ತರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ನೀವೆಲ್ಲರೂ ನಿಮ್ಮ ಆರೋಗ್ಯ ನೋಡಿಕೊಳ್ಳಿ. ಜೈಲಿನಲ್ಲಿದ್ದರೂ ನಿಮ್ಮ ಬಗ್ಗೆ ಚಿಂತೆ ಕಾಡಲಿದೆ. ನೀವು ಸಂತಸದಿಂದ ಇದ್ದರೆ, ನಾನು ಸಂತಸದಿಂದ ಇರುತ್ತೇನೆ ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಸಿದಂತೆ ಹಣ ವರ್ಗಾವಣೆ ಪ್ರಕರಣದಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅನುವು ಮಾಡಿಕೊಡಲು ಸುಪ್ರೀಂ ಕೋರ್ಟ್ ಮೇ. 10 ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು.





