Mysore
30
few clouds

Social Media

ಬುಧವಾರ, 28 ಜನವರಿ 2026
Light
Dark

ಗಂಗೋತ್ರಿ ಪ್ರವಾಸಕ್ಕೆ ತೆರಳಿದ್ದ ಕೇರಳದ 28 ಪ್ರವಾಸಿಗರು ನಾಪತ್ತೆ.?

ಉತ್ತರಕಾಶಿ: ಉತ್ತರಾಖಂಡ್‌ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಬಳಿ ನಿನ್ನೆ ಸಂಭವಿಸಿದ ಭೀಕರ ಮೇಘಸ್ಫೋಟ, ಹಠಾತ್‌ ಪ್ರವಾಹ, ಭೂಕುಸಿತದ ಬಳಿಕ 28 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ. ಕೇರಳ ಮೂಲದ 28 ಜನರು ಉತ್ತರಾಖಂಡದಿಂದ ಗಂಗೋತ್ರಿ ಮಾರ್ಗವಾಗಿ ತೆರಳಿದ್ದರು ಎನ್ನಲಾಗಿದೆ.

10 ದಿನಗಳ ಪ್ರವಾಸಕ್ಕೆಂದು ಉತ್ತರಾಖಂಡಕ್ಕೆ ತೆರಳಿದ್ದ ಕೇರಳ ಪ್ರವಾಸಿಗರು, ಭೂಕುಸಿತದ ಬಳಿಕ ಇದುವರೆಗೂ ಯಾರೂ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಕುಟುಂಬದವರು ತೀವ್ರ ಆತಂಕಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.

Tags:
error: Content is protected !!