ಟೊಕಿಯೊ: ಎರಡನೇ ವಿಶ್ವಯುದ್ಧದಲ್ಲಿ ಸಮಯದಲ್ಲಿ ಸ್ಪೋಟಗೊಳ್ಳದೆ ಭೂಮಿಯಲ್ಲಿ ಅಡಗಿಹೋಗಿದ್ದ ಬಾಂಬ್‌ವೊಂದು ಈಗ ಸ್ಫೋಟಗೊಂಡಿರುವ ಘಟನೆ ಬುಧವಾರ ಜಪಾನಿನ ವಿಮಾನ ನಿಲ್ದಾಣದ ಸಮೀಪ ಜರುಗಿದೆ.
ಅದೃಷ್ಟವಶಾತ್ ಯಾರೊಬ್ಬರಿಗೂ ಹಾನಿಯಾಗಿಲ್ಲ. ಟ್ಯಾಕ್ಸಿ ನಿಲುಗಡೆ ಸ್ಥಳವು ಹಾನಿಗೊಳಗಾಗಿದೆ ಹಾಗೂ 80ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಯುದ್ಧವಾದ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಅಮೆರಿಕಾ ಜಪಾನ್ ಮೇಲೆ ದಾಳಿ ಮಾಡಿದಾಗ ಅಮೆರಿಕಾವು ಬಾಂಬ್‌ಗಳನ್ನು ಎಸೆದಿತ್ತು. ಅಂದು ಎಸೆದ ಕೆಲವು ಬಾಂಬ್‌ಗಳು ಸ್ಫೋಟಗೊಳ್ಳದೆ ಭೂಮಿಯಲ್ಲಿ ಹುದುಗಿ ಹೋಗಿದ್ದವು. ಅಂದಿನ ಅಮೆರಿಕಾದ ಬಾಂಬ್ ಜಪಾನ್‌ನ ವಿಮಾನ ನಿಲ್ದಾಣದಲ್ಲಿ ಇಂದು ಸ್ಫೋಟಗೊಂಡಿದೆ. ಆದರೆ, ತತ್‌ಕ್ಷಣ ಸ್ಫೋಟಕ್ಕೆ ಕಾರಣ ಏನೆಂದು ಪತ್ತೆ ಮಾಡಲಾಗುತ್ತಿದೆ ಎಂದು ಸ್ವಯಂ ರಕ್ಷಣಾ ದಳ ಮತ್ತು ಪೊಲೀಸರು ತನಿಖೆಯು ಹೇಳಿದೆ ಎಂದರು.
500ಪೌಂಡ್ ಅಮೆರಿಕಾ ಬಾಂಬ್‌ನಿಂದ ಸ್ಫೋಟ ಸಂಭವಿಸಿದೆ. ನೈಋತ್ಯ ಜಪಾನ್‌ನ ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ ಈ ಸ್ಪೋಟ ಸಂಭವಿಸಿದೆ. ಅದೃಷ್ಟವಶಾತ್ ಸ್ಫೋಟದ ಸಮೀಪ ಯಾವುದೇ ವಿಮಾನ ಇರಲಿಲ್ಲ ಎಂದು ತಿಳಿಸಿದರು.
ವಿಮಾನ ಹಾರಾಟವು ಗುರುವಾರ ಬೆಳಿಗ್ಗೆಯಿಂದ ಮರು ಆರಂಭವಾಗಲಿದೆ ಎಂದು ಸಂಪುಟದ ಮುಖ್ಯ ಕಾರ್ಯದರ್ಶಿ ಯೋಶಿಮಾಸ ಹಯಾಶಿ ಹೇಳಿದ್ದಾರೆ.
ಅಂದಿನ ವಿಶ್ವಯುದ್ದದಲ್ಲಿ ಅಮೆರಿಕ ಸೇನೆ ಎಸೆದಿದ್ದ ಅನೇಕ ಬಾಂಬ್‌ಗಳು ಸ್ಫೋಟಗೊಳ್ಳದೆ ಜಪಾನ್‌ನ ಭೂಮಿಯಲ್ಲಿ ಅಡಗಿವೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.





