ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಟೊನಾಲ್ಡ್ ಟ್ರಂಪ್ ಬೀಸಿದ ಸುಂಕಾಸ್ತ್ರ ಈಗ ಭಾರತದ ಬುಡಕ್ಕೂ ಬಂದಿದೆ.
ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾದ ನಂತರ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಅಮೆರಿಕಾ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.
ಭಾರತ ನಮ್ಮ ಉತ್ಪನ್ನಗಳ ಮೇಲೆ 100% ಹೆಚ್ಚು ಆಟೋ ಟ್ಯಾರೀಫ್ ವಿಧಿಸುತ್ತಿದೆ. ಸದ್ಯದ ವ್ಯವಸ್ಥೆಯಿಂದ ಅಮೆರಿಕಾಗೆ ನ್ಯಾಯ ಸಿಗುತ್ತಿಲ್ಲ. ಅದಕ್ಕೆ ಏಪ್ರಿಲ್.2ರಿಂದ ಆಯಾಯ ದೇಶಗಳ ಮೇಲೆ ನಾವು ಪ್ರತಿ ಸುಂಕ ವಿಧಿಸುತ್ತೇವೆ. ಅವರು ಎಷ್ಟು ಸುಂಕ ವಿಧಿಸುತ್ತಾರೋ ನಾವು ಅಷ್ಟೇ ವಿಧಿಸುತ್ತೇವೆ. ಇದರಿಂದ ಅಮೆರಿಕಾ ಮತ್ತಷ್ಟು ಶ್ರೀಮಂತ ಆಗಲಿದೆ ಎಂದು ಗುಡುಗಿದರು.
ಇನ್ನು ಅಮೆರಿಕಾದ ಸುಂಕಾಸ್ತ್ರಕ್ಕೆ ಚೀನಾ ಗರಂ ಆಗಿದೆ. ನಿಮಗೆ ಯುದ್ಧವೇ ಬೇಕು ಎಂದರೆ ನಾವು ಸಿದ್ಧವಿದ್ದೇವೆ. ಕೊನೆಯವರೆಗೂ ಹೋರಾಡುತ್ತೇವೆ ಎಂದು ಚೀನಾ ಘೋಷಣೆ ಮಾಡಿದೆ.
ಇನ್ನು ಕೆನಡಾ ಸಹ ಅಮೆರಿಕಾದಿಂದ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸುವುದಾಗಿ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ ಮಸ್ಕ್ ನೇತೃತ್ವದ ಸ್ಟಾರ್‌ಲಿಂಗ್ ಜೊತೆಗಿನ ಒಪ್ಪಂದವನ್ನು ಸಹ ರದ್ದು ಮಾಡಿಕೊಂಡಿದೆ.





