ಹೊಸದಿಲ್ಲಿ: ಕೋವಿಡ್-೧೯ ಲಾಕ್‌ಡೌನ್ ಸಂದರ್ಭದಲ್ಲಿ ಅತಿಯಾಗಿ ನೇಮಕ ಮಾಡಿಕೊಂಡಿದ್ದ ಅಮೆಜಾನ್ ಸಂಸ್ಥೆ ಇದೀಗ ಸುಮಾರು ೨೦ ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ.
ಮುಂಬರುವ ತಿಂಗಳುಗಳಲ್ಲಿ, ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ ಸುಮಾರು 20.000 ಉದ್ಯೋಗಿಗಳನ್ನು ಅಮೆಜಾನ್ ವಜಾ ಮಾಡಲು ನಿರ್ಧರಿಸಿದೆ ಎಂದು ವರದಿಯೊಂದು ತಿಳಿಸಿದೆ. ಜಾಗತಿಕವಾಗಿ ೧.೬ ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಟೆಕ್ ದೈತ್ಯ ಅಮೆಜಾನ್, ವಿವಿಧ ಇಲಾಖೆಗಳ ಸಿಬ್ಬಂದಿಗಳ ವಜಾಕ್ಕೆ ಮುಂದಾಗಿದೆ. ಇವುಗಳಲ್ಲಿ ವಿತರಣಾ ಕೆಲಸಗಾರರು, ಕಾರ್ಪೊರೇಟ್ ಅಧಿಕಾರಿಗಳೂ ಸೇರಿದ್ದಾರೆ.