Mysore
22
broken clouds

Social Media

ಭಾನುವಾರ, 25 ಜನವರಿ 2026
Light
Dark

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಮಹಾನ್‌ ವ್ಯಕ್ತಿ: ಅಮರ್ತ್ಯ ಸೇನ್‌

ಪಶ್ಚಿಮ ಬಂಗಾಳ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಉತ್ತಮ ರಾಜಕೀಯ ನಾಯಕ ಮತ್ತು ಮಹಾನ್‌ ವ್ಯಕ್ತಿ. ಅವರು ಜಗತ್ತಿನ ಅಗತ್ಯತೆಯನ್ನು ಅರ್ಥಮಾಡಿಕೊಂಡ ಅದ್ಭುತ ಅರ್ಥಶಾಸ್ತ್ರಜ್ಞ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನಮೋಹನ ಸಿಂಗ್‌ ಹಾಗೂ ನಾನು ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದಲ್ಲಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುವುದರರೊಂದಿಗೆ ಉತ್ತಮ ಸ್ನೇಹಿತರಾಗಿದ್ದೆವು. ಸಿಂಗ್‌ ಅವರು ತಮ್ಮ ಜೀವನದಲ್ಲಿ ವಜ್ರಚ್ಛೇದಿಕ ಪ್ರಜ್ಞಾ ಪರಮಿತಾ ಸೂತ್ರದಲ್ಲಿ ಗೌತಮ ಬುದ್ಧ ವಿವರಿಸಿದ ಸಂದೇಶದ ಸಾರವನ್ನು ಅಳವಡಿಸಿಕೊಂಡಿದ್ದರು ಎಂದು ಹೇಳಿದರು.

ಸಿಂಗ್‌ ಅವರು ಮತ್ತು ನಾನು ಒಟ್ಟಿಗೆ ವಿದ್ಯಾರ್ಥಿಗಳಾಗಿದ್ದಾಗ ಮತ್ತು ದೆಹಲಿ ಸ್ಕೂಳ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಸಹದ್ಯೋಗಿಗಳಾಗಿದ್ದಾಗ ನಾನು ಅವರೊಡನೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಆ ವೇಳೆ ಅವರು ಗೌತಮ ಬುದ್ಧನ ವಜ್ರಚ್ಛೇದಿಕ ಪ್ರಜ್ಞಾಪರಮಿತಾ ಸೂತ್ರ ಅಥವಾ ವಜ್ರ ಸೂತ್ರದಲ್ಲಿ ಮುನಷ್ಯರ ವಿಭಿನ್ನ ನಂಬಿಕೆಗಳ ಅಸ್ತಿತ್ವವನ್ನು ಗುರುತಿಸುವುದು ಮುಖ್ಯ ಎಂಬ ಸಂದೇಶವನ್ನು ಅರ್ಥೈಸಿಕೊಂಡಿದ್ದರು. ಅಲ್ಲದೇ ಈ ದೇಶದ ನೆಲದಲ್ಲಿ ಪಾಕಿಸ್ತಾನ ಭಯೋತ್ಪಾದನೆಯ ಪುರಾವೆಗಳು ಕಂಡುಬಂದಾಗ ಪ್ರಜ್ಞಾ ಪೂರ್ವಕವಾಗಿ ಪ್ರತಿಕ್ರಿಯಿಸಬಹುದಿತ್ತು. ಆದರೆ ಅವರು ಹಾಗೇ ಮಾಡಲಿಲ್ಲ, ಏಕೆಂದರೆ ಅವರಿಗೆ ವಜ್ರ ಸೂತ್ರದಲ್ಲಿ ವಿವರಿಸಲಾದ ಗೌತಮ ಬುದ್ಧನ ಸಂದೇಶವನ್ನು ಅರ್ಥೈಸಿಕೊಂಡಿದ್ದರು ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನು ಮನಮೋಹನ ಸಿಂಗ್‌ ಅವರು ಸಿಖ್‌ ಸಮುದಾಯಕ್ಕೆ ಸೇರಿದವರಾಗಿದ್ದರೂ ಕೂಡ ಗೌತಮ ಬುದ್ಧನ ಸಂದೇಶವನ್ನು ಹಾಗೂ ಇತರ ಧರ್ಮಗಳನ್ನು ಬೇರೆ ಸಮುದಾಯಗಳ ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಹೀಗಾಗಿ ನಾನು, ಸಿಂಗ್‌ ಅವರನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದಿದ್ದಾರೆ.

Tags:
error: Content is protected !!