ಸೊಮಾಲಿಯಾ: ಅಲ್-ಶಬಾಬ್ ಆತ್ಮಾಹುತಿ ಬಾಂಬರ್ ಮತ್ತು ಬಂದೂಕುಧಾರಿಗಳು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ.
ಆತ್ಮಾಹುತಿ ಬಾಂಬ್ ದಾಳಿಯಲ್ಲಿ 32 ಮಂದಿ ಸಾವನ್ನಪ್ಪಿದ್ದು, 63ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದೆ. ಗಾಯಗೊಂಡವರಲ್ಲೂ ಹಲವರ ಸ್ಥಿತಿ ಗಂಭೀರವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಲ್‌ಖೈದಾ ಬೆಂಬಲಿತ ಜಿಹಾದಿಗಳು ಫೆಡರಲ್ ಸರ್ಕಾರದ ವಿರುದ್ಧ ದಂಗೆ ನಡೆಸುತ್ತಿದ್ದಾರೆ. ಅಲ್ಲಿ ಜನಪ್ರಿಯವಾಗಿರುವ ಲಿಡೋ ಬೀಚ್ ಪ್ರದೇಶವನ್ನು ಆಗಿನಿಂದಲೂ ಗುರಿಯಾಗಿಸಿಕೊಂಡಿದ್ದಾರೆ.
ಅಲ್-ಶಬಾಬ್ ಆತ್ಮಾಹುತಿ ಬಾಂಬರ್ ಮತ್ತು ಬಂದೂಕುಧಾರಿಗಳು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಿಂದ 32 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರ ಅಬ್ದಿಫತಾ ಆದಾನ್ ಹಸನ್ ಮಾಹಿತಿ ನೀಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಅಲ್-ಶಬಾಬ್ ಹೊಣೆಗಾರಿಕೆ ಹೊತ್ತುಕೊಂಡಿದ್ದು, ಆತ್ಮಾಹುತಿ ಬಾಂಬರ್ ಸಾಧನವನ್ನು ಸ್ಫೋಟಿಸಿದಾಗ ಬಂದೂಕುಧಾರಿಗಳು ಈ ಪ್ರದೇಶಕ್ಕೆ ನುಗ್ಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.