ಮ್ಯಾಡ್ರಿಡ್: ಸ್ಪೇನ್‌ನ ವೇಲ್ಸೆನಿಯಾದಲ್ಲಿ ನಡೆದ ರೇಸ್ ಇವೆಂಟ್‌ನಲ್ಲಿ ತಮಿಳು ನಟ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿದೆ.
ಅಜಿತ್ ಸ್ಪೇನ್‌ನಲ್ಲಿ ನಡೆದ ರೇಸ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ಕಾರು ಇನ್ನೊಂದು ಕಾರಿಗೆ ಡಿಕ್ಕಿಯಾಗಿ, ಹಲವಾರು ಬಾರಿ ಪಲ್ಟಿಯಾಗಿ ನಿಂತಿದೆ. ಅಜಿತ್ ಅವರ ವ್ಯವಸ್ಥಾಪಕ ಸುರೇಶ ಚಂದ್ರ ಈ ಅಪಘಾತದ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಿದ್ದಾರೆ.
ಕೆಲ ವಾರಗಳ ಹಿಂದಷ್ಟೆ ರೇಸ್ ಟ್ರ್ಯಾಕ್‌ನಲ್ಲಿ ಅಜಿತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಇದೀಗ ಎರಡನೇ ಬಾರಿ ಮತ್ತೊಮ್ಮೆ ಅವರ ಕಾರು ಅಪಘಾತಕ್ಕೆ ಈಡಾಗಿದೆ.
ರೇಸ್‌ನಲ್ಲಿ 5ನೇ ಸುತ್ತಿನವರೆಗೂ ಚೆನ್ನಾಗಿಯೇ ಕಾರು ಓಡಿಸಿದ ಅಜಿತ್ 14ನೇ ಸ್ಥಾನದಲ್ಲಿದ್ದರು. 6ನೇ ಸುತ್ತಿನಲ್ಲಿ ಅವರ ಕಾರು ಅಪಘಾತಕ್ಕೀಡಾಯಿತು. ಮೊದಲ ಬಾರಿಗೆ ಅವರ ಕಾರು ಅಪಘಾತವಾದಾಗ ಚೆನ್ನಾಗಿಯೆ ಇದ್ದರು. ಎರಡನೇ ಬಾರಿ ಅಪಘಾತ ಸಂಭವಿಸಿದಾಗ ಅವರ ಕಾರು ಪಲ್ಟಿಯಾಯಿತು. ನಂತರ ಮತ್ತೆ ಅವರು ರೇಸ್ ಮುಂದುವರಿಸಿದರು.
ಸಿನಿಮಾಗಳ ವಿಷಯಕ್ಕೆ ಬಂದರೆ ಅಜಿತ್ ʼಗುಡ್ ಬ್ಯಾಡ್ ಅಂಡ್ ಅಗ್ಲಿʼ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ.





