Mysore
31
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ವಿಮಾನ ಪತನಕ್ಕೂ ಮುನ್ನ ಅಜಿತ್‌ ಪವಾರ್‌ ಕೊನೆಯ ಪೋಸ್ಟ್‌ ವೈರಲ್‌

ಬಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರಿಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ದುರಂತ ಸಂಭವಿಸುವ ಕೇವಲ 23 ನಿಮಿಷಗಳ ಮೊದಲು ಅಜಿತ್‌ ಪವಾರ್‌ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್‌ರಾಯ್‌ ಅವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿ ಪೋಸ್ಟ್‌ ಮಾಡಿದ್ದೇ ಅವರ ಕೊನೆಯ ಸಂದೇಶವಾಯಿತು.

ಅಜಿತ್‌ ಪವಾರ್‌ ಅವರು ಮರಾಠಿಯಲ್ಲಿ ಬರೆದಿದ್ದ ಸಂದೇಶದ ಅರ್ಥ ಹೀಗಿದೆ.
ಮಹಾನ್‌ ಸ್ವಾತಂತ್ರ್ಯ ಹೋರಾಟಗಾರ, ಸ್ವರಾಜ್ಯದ ಪ್ರತಿಪಾದಕ ಹಾಗೂ ಪಂಜಾಬ್‌ ಕೇಸರಿ ಲಾಲಾ ಲಜಪತ್‌ ರಾಯ್‌ ಅವರ ಜನ್ಮದಿನದಂದು ಅವರಿಗೆ ನನ್ನ ವಿನಮ್ರ ನಮನಗಳು. ಅವರ ದೇಶಪ್ರೇಮ ನಮಗೆ ಸದಾ ಕಾಲ ಪ್ರೇರಣೆಯಾಗಿರುತ್ತದೆ ಎಂದು ಪೋಸ್ಟ್‌ ಮಾಡಿದ್ದರು.

 

 

Tags:
error: Content is protected !!