Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸ್ಪೇಸ್‌ ಎಕ್ಸ್‌ದೊಂದಿಗೆ ಒಪ್ಪಂದ ಮಾಡಿಕೊಂಡ ಏರ್‌ಟೆಲ್‌, ಜಿಯೋ

ನವದೆಹಲಿ: ಏರ್‌ಟೆಲ್‌ ಹಾಗೂ ಜಿಯೋ ಕಂಪೆನಿಗಳು ದೇಶದಲ್ಲಿ ಉಪಗ್ರಹ ಆಧರಿತ ವೇಗದ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಎಲಾನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ದೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ಭಾರತಕ್ಕೆ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆಯನ್ನು ಜಾರಿಗೊಳಿಸಲು ಸ್ಪೇಸ್‌ ಎಕ್ಸ್‌ದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಕುರಿತು ಏರ್‌ಟೆಲ್‌ ಈಗಾಗಲೇ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ ಮುಖೇಶ್‌ ಅಂಬಾನಿಯವರು ಜಿಯೋ ಬುಧವಾರ ಎಲಾನ್‌ ಮಸ್ಕ್‌ ಅವರ ಕಂಪೆನಿಯೊಂದಿಗೆ ಇದೇ ರೀತಿಯ ಒಪ್ಪಂದವನ್ನು ಘೋಷಿಸಿದೆ.

ಈ ಕುರಿತು ಜಿಯೋ ಕಂಪೆನಿಯೂ ಮಾಧ್ಯಮ ಪ್ರಕಟಣೆಯಲ್ಲಿ, ಈ ಒಪ್ಪಂದವನ್ನು ಭಾರತದ ಅತ್ಯಂತ ಗ್ರಾಮೀಣ ಮತ್ತು ದೂರದ ಪ್ರದೇಶಗಳನ್ನು ಒಳಗೊಂಡಂತೆ ದೇಶಾದ್ಯಂತ ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ತಲುಪಿಸಲು ಸಹಾಯ ಮಾಡುತ್ತದೆ. ಅಲ್ಲದೇ ಜಿಯೋ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್‌ ಉಪಕರಣಗಳನ್ನು ನೀಡುವುದಲ್ಲದೆ, ಗ್ರಾಹಕ ಸೇವಾ ವಲಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ.

Tags:
error: Content is protected !!