ಮುಂಬೈ: ನವೆಂಬರ್.15ರಿಂದ ಡಿಸೆಂಬರ್.31ರವರೆಗೆ ಭಾರತ ಮತ್ತು ಅಮೇರಿಕಾ ನಡುವೆ ಸಂಚರಿಸುವ 60 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಈ ಬಗ್ಗೆ ಏರ್ ಇಂಡಿಯಾ ಕಂಪನಿಯು ಮಾಹಿತಿ ನೀಡಿದ್ದು, ಚಿಕಾಗೊ, ವಾಷಿಂಗ್ಟನ್, ನ್ಯೂಯಾರ್ಕ್ ಸೇರಿದಂತೆ ಇತರೆ ನಗರಗಳ ನಡುವೆ ಸಂಚರಿಸುತ್ತಿದ್ದ ವಿಮಾನಗಳ ಸಂಚಾರ ರದ್ದಾಗಿದೆ.
ಈ ಅವಧಿಯಲ್ಲಿ ಭಾರತದಿಂದ ಅಮೇರಿಕಾಗೆ ಸಂಚಾರ ಮಾಡುವವರ ಸಂಖ್ಯೆ ಬಹಳ ಹೆಚ್ಚಿರುತ್ತದೆ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೊಂದು ಪ್ರಮುಖ ಕಾರಣವೆಂದರೆ ಕೆಲ ವಿಮಾನಗಳ ನಿರ್ವಹಣಾ ಕಾರ್ಯ ಪೂರ್ಣಗೊಂಡಿಲ್ಲ. ಹಾಗಾಗಿ ಅವು ಸೇವೆಗೆ ಲಭ್ಯವಿಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.