ಲಖನೌ: ನಾವು ಎರಡು ಮೂರು ಮದುವೆಯಾದರೂ, ಸಮಾಜದಲ್ಲಿ ಎಲ್ಲ ಮಹಿಳೆಯರನ್ನೂ ಗೌರವಿಸುತ್ತೇವೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ, ಮೂವರ ಜತೆ ಸಂಸಾರ ಹೂಡುತ್ತಾರೆ ಎಂದು ಉತ್ತರ ಪ್ರದೇಶ ಎಐಎಂಐಎಂ ಅಧ್ಯಕ್ಷ ಶೌಕತ್ ಅಲಿ ವ್ಯಂಗ್ಯವಾಡಿದ್ದಾರೆ. ಎಐಎಂಐಎಂ ಪಕ್ಷದ ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ಶೌಕತ್ ಅಲಿ, ಹಿಂದೂ ವಿವಾಹಕ್ಕೆ ಸಂಬಂಧಿಸಿದಂತೆ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶೌಕತ್ ಅಲಿ, “ನಾವು ಮೂರು ಮದುವೆಗಳನ್ನಾಗುತ್ತೇವೆ ಎಂದು ಜನರು ಹೇಳುತ್ತಾರೆ. ನಾವು ಎರಡು ಮದುವೆ ಆದರೂ, ಸಮಾಜದಲ್ಲಿ ಇಬ್ಬರೂ ಹೆಂಡತಿಯರಿಗೆ ಗೌರವ ನೀಡುತ್ತೇವೆ. ಆದರೆ ನೀವು (ಹಿಂದೂಗಳು) ಒಬ್ಬರನ್ನು ಮದುವೆಯಾಗುತ್ತೀರಿ ಮತ್ತು ಮೂವರು ಪ್ರೇಯಸಿಯರನ್ನು ಹೊಂದಿರುತ್ತೀರಿ. ನಿಮ್ಮ ಹೆಂಡತಿಯನ್ನಾಗಲೀ ಅಥವಾ ಪ್ರೇಯಸಿಯರನ್ನಾಗಲೀ ನೀವು ಗೌರವಿಸುವುದಿಲ್ಲ. ಆದರೆ ನಾವು ಎರಡು ಮದುವೆಯಾದರೂ, ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ನಮ್ಮ ಮಕ್ಕಳ ಹೆಸರು ಕೂಡ ರೇಷನ್ ಕಾರ್ಡ್‌ನಲ್ಲಿ ಇರುತ್ತದೆ” ಎಂದು ಲೇವಡಿ ಮಾಡಿದ್ದಾರೆ.