Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಆಗ್ರಾ | ಮದುವೆ ಮೆರವಣಿಗೆ ಹೊರಟಿದ್ದ ದಲಿತ ವರನ ಮೇಲೆ ಹಲ್ಲೆ

agra fighting

ಆಗ್ರಾ : ಮದುವೆ ಮೆರವಣಿಗೆ ವೇಳೆ ದಲಿತ ವರನ ಮೇಲೆ ಮೇಲ್ಜಾತಿಯ ಜನರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ (Agra) ನಾಗ್ಲಾ ತಲ್ಫಿ ಪ್ರದೇಶದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಗ್ಲಾ ತಲ್ಫಿ ನಿವಾಸಿ ಅನಿತಾ ಅವರು ನೀಡಿದ ದೂರಿನ ಪ್ರಕಾರ, ಮಥುರಾದಿಂದ ತನ್ನ ಮಗಳ ಮದುವೆ ಮೆರವಣಿಗೆ ಬಂದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ:- ಲಾರಿ-ಓಮ್ಮಿ ಕಾರಿನ ನಡುವೆ ಭೀಕರ ಅಪಘಾತ ; ಸ್ಥಳದಲ್ಲೇ ತಾಯಿ,ಮಗ ಸಾವು

ಮದುವೆಯು ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಕಲ್ಯಾಣ ಮನೆಯಲ್ಲಿ ನಡೆಯಬೇಕಿತ್ತು. ಡಿಜೆ ಸಂಗೀತದೊಂದಿಗೆ ಮೆರವಣಿಗೆಯು ರಸ್ತೆಯುದ್ದಕ್ಕೂ ಚಲಿಸುತ್ತಿದ್ದಂತೆ, ಮೇಲ್ಜಾತಿಯ ಪುರುಷರ ಗುಂಪು ಕೋಲುಗಳು ಮತ್ತು ಲಾಠಿಗಳೊಂದಿಗೆ ಬಂದು ವರ ಮತ್ತು ಇತರರ ಮೇಲೆ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:- ಮುಂದುವರೆದ ಮಳೆ ; ರಾಜ್ಯದಲ್ಲಿ ಏ.22 ರವರೆಗೆ ಮಳೆ ಮೂನ್ಸೂಚನೆ

ದಾಳಿಕೋರರು ವರ ಮತ್ತು ಮದುವೆಯ ಪಾರ್ಟಿಯ ಹಲವಾರು ಸದಸ್ಯರನ್ನು ಥಳಿಸಿದ್ದಾರೆ. ಹಲ್ಲೆಯಿಂದಾಗಿ, ಮದುವೆ ಸ್ಥಳದಲ್ಲಿ ಯಾವುದೇ ಆಚರಣೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಇಡೀ ಸಮಾರಂಭವನ್ನು ಸ್ಥಳಾಂತರಿಸಿ ನಮ್ಮ ಮನೆಯಲ್ಲಿ ನಡೆಸಬೇಕಾಯಿತು ಎಂದು ಅನಿತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ

Tags:
error: Content is protected !!